ETV Bharat / state

ಕಾಂಗ್ರೆಸ್​​ ತೊರೆಯಲು ಸಿದ್ಧರಾಮಯ್ಯ 'ಸ್ವಾರ್ಥ' ರಾಜಕಾರಣವೇ ಕಾರಣ: ಸಚಿವ ಬಿ.ಸಿ. ಪಾಟೀಲ್ - ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ಆರೋಪ

ಚುನಾವಣೆ ಸಂದರ್ಭದಲ್ಲಿ ನಮ್ಮ ಕುಟುಂಬದ ಸದಸ್ಯರು ದುಡಿದಿರುತ್ತಾರೆ‌. ಹೀಗಾಗಿ ಕೆಲವೊಂದು ಸಲಹೆ ಸೂಚನೆ ನೀಡುತ್ತಾರೆ‌. ಹಾಗೆಂದ ಮಾತ್ರಕ್ಕೆ ನಮ್ಮ ಪರವಾಗಿ ಕುಟುಂಬದವರು ಆಡಳಿತ ನಡೆಸುತ್ತಾರೆ ಎಂದಲ್ಲ.‌ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸಲಹೆ ನೀಡಬಹುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

Agriculture Minister B.C Patil
ಕೃಷಿ ಸಚಿವ ಬಿ.ಸಿ. ಪಾಟೀಲ್...
author img

By

Published : Jun 5, 2020, 12:37 PM IST

ಕೊಪ್ಪಳ: ಸಿದ್ದರಾಮಯ್ಯ ಅವರ ಸ್ವಾರ್ಥ ರಾಜಕಾರಣ ಹಾಗೂ ಕಾಂಗ್ರೆಸ್ ಪಕ್ಷ ನಮಗೆ ಮೋಸ ಮಾಡಿದ್ದರಿಂದ ನಾವು ಆ ಪಕ್ಷವನ್ನು ತೊರೆದೆವು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ತಾಲೂಕಿನ ಹುಲಗಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ರಾಕೇಶ್, ಸೂಪರ್ ಸಿಎಂ ಹಾಗೂ ಕೆಂಪಯ್ಯ, ಗೃಹ ಸಚಿವ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಅದರಂತೆ ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಆರೋಪಿಸಲಾಗುತ್ತಿದೆ. ಸಿದ್ದರಾಮಯ್ಯ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ. ರಾಜಕೀಯ ಕಾರಣಕ್ಕೆ ಇಂತಹ ಆರೋಪ ಮಾಡುತ್ತಾರೆ ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ್.

ಚುನಾವಣೆ ಸಂದರ್ಭದಲ್ಲಿ ನಮ್ಮ ಕುಟುಂಬದ ಸದಸ್ಯರು ದುಡಿದಿರುತ್ತಾರೆ‌. ಹೀಗಾಗಿ ಕೆಲವೊಂದು ಸಲಹೆ ಸೂಚನೆ ನೀಡುತ್ತಾರೆ‌. ಹಾಗೆಂದ ಮಾತ್ರಕ್ಕೆ ನಮ್ಮ ಪರವಾಗಿ ಕುಟುಂಬದವರು ಆಡಳಿತ ನಡೆಸುತ್ತಾರೆ ಎಂದಲ್ಲ.‌ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸಲಹೆ ನೀಡಬಹುದು ಎಂದರು.

ಅದನ್ನು ನಾವು ಸ್ವೀಕರಿಸಬಹುದು ಅಥವಾ ಬಿಡಬಹದು ಎಂದ ಅವರು, ಇನ್ನು ಸಿದ್ದರಾಮಯ್ಯ ಸರಿಯಾಗಿ ಆಡಳಿತ ನಿರ್ವಹಣೆ ಮಾಡದ ಹಿನ್ನೆಲೆ ನಾವು ಪಕ್ಷ ಬಿಡುವ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಆರೋಪಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಬರಲು ಆರ್. ಶಂಕರ್, ಎಂಟಿಬಿ ನಾಗರಾಜ್ ಹಾಗೂ ವಿಶ್ವನಾಥ್ ಕೊಡುಗೆ ಇದೆ. ಅವರಿಗೆ ಅನುಕೂಲ ಮಾಡಿಕೊಡ್ತೀವಿ ಎಂದು ಸಿಎಂ ಬಿಎಸ್​​​​​ವೈ ಮಾತು ಕೊಟ್ಟಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ತಾರೆ ಎಂದರು.

ಇನ್ನು ಎಂಟಿಬಿ ನಾಗರಾಜ್​​ ಅವರಿಗೆ ಬಚ್ಚೇಗೌಡ ಕುಟುಂಬದಿಂದ ಅನ್ಯಾಯವಾಗಿರೋದು ನಿಜ. ಚುನಾವಣೆಯಲ್ಲಿ ಸ್ಪರ್ಧಿಸದಂತೆ ಪಕ್ಷ ಬಚ್ಚೇಗೌಡರಿಗೆ ಸೂಚನೆ ನೀಡಿತ್ತು. ಆದರೂ ಚುನಾವಣೆಗೆ ಶರತ್ ಬಚ್ಚೇಗೌಡ ಸ್ಪರ್ಧಿಸಿದರು‌. ಈ ಮೂಲಕ ಎಂಟಿಬಿ ನಾಗರಾಜ್​​​​​ಗೆ ಅನ್ಯಾಯವಾಗಿದೆ ಎಂದ ಅವರು, ಇನ್ನು ಕೇರಳದಲ್ಲಿ ಗರ್ಭಿಣಿ ಆನೆಯನ್ನು ಸಾಯಿಸಿದ್ದು, ಹೇಯ ಕೃತ್ಯ ಎಂದು ಅಭಿಪ್ರಾಯಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.