ETV Bharat / state

ಸೀಳುನಾಲಿಗೆಯ ಸಿದ್ದರಾಮಯ್ಯ ಭಸ್ಮಾಸುರ ಇದ್ದಂತೆ: ಶ್ರೀರಾಮುಲು

ಸಿದ್ದರಾಮಯ್ಯ ನಮ್ಮ ನಾಯಕರನ್ನು ನಾಯಿಗೆ ಏನ್ ಹೋಲಿಸಿದ್ದಾರೋ. ನಾವೆಲ್ಲ ಅವರನ್ನು ಎರಡು ತಲೆ ಹಾವು ಎಂದು ಕರೆಯಬೇಕಾಗುತ್ತದೆ. ಸೀಳು ನಾಲಿಗೆ ಇಟ್ಟುಕೊಂಡು ಸಿದ್ದರಾಮಯ್ಯ ಮಾತಾಡ್ತಿದ್ದಾರೆ. ಅವರ ಪಾರ್ಟಿಯಲ್ಲೇ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

Siddaramaiah is like a Bhasmasura says Sriramulu
ಗಂಗಾವತಿಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು
author img

By

Published : Jun 9, 2022, 4:26 PM IST

ಗಂಗಾವತಿ(ಕೊಪ್ಪಳ): ಸಿದ್ದರಾಮಯ್ಯಗೆ ಸೀಳು ನಾಲಿಗೆ ಇದ್ದು, ಎರಡು ತಲೆ ಹಾವಿನಂತೆ ಅವರ ಧೋರಣೆ ಇದೆ. ಬಿಜೆಪಿ ನಾಯಕರನ್ನು ಸೀಳು ನಾಯಿಗೆ ಹೋಲಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಟೀಕೆಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಸಿದ್ದರಾಮಯ್ಯ ನಮ್ಮ ನಾಯಕರನ್ನು ನಾಯಿಗೆ ಏನ್ ಹೋಲಿಸಿದ್ದಾರೋ, ನಾವೆಲ್ಲ ಅವರನ್ನು ಎರಡು ತಲೆ ಹಾವು ಎಂದು ಕರೆಯಬೇಕಾಗುತ್ತದೆ ಎಂದು ಏಕವಚನ ಪದಪ್ರಯೋಗ ಮಾಡುವ ಮೂಲಕ ಸಾರಿಗೆ ಸಚಿವ ಬಿ. ಶ್ರೀರಾಮುಲು ಕಿಡಿಕಾರಿದ್ದಾರೆ.

ಗಂಗಾವತಿಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು

ಸಿದ್ದರಾಮಯ್ಯ ಅವರ ನಾಲಿಗೆ ಸೀಳು ನಾಲಿಗೆ‌. ಅವರು ಬೆಳಗ್ಗೆ ಒಂದು ಮಾತಾಡ್ತಾರೆ, ಸಂಜೆ ಒಂದು ಮಾತಾಡ್ತಾರೆ. ಅವರ ಪಾರ್ಟಿಯಲ್ಲೇ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ. ಸೀಳು ನಾಲಿಗೆ ಇಟ್ಟುಕೊಂಡು ಸಿದ್ದರಾಮಯ್ಯ ಮಾತಾಡ್ತಿದ್ದಾರೆ. ಮೋದಿ RSS ವಿರುದ್ಧ ಮಾತನಾಡುತ್ತಾರೆ. ಡಿಕೆಶಿನಾ ಹೇಗೆ ಮುಗಿಸಬೇಕೆಂದು ಚೆಸ್ ಆಟ ಆಡ್ತಿದ್ದಾರೆ. ಸಿದ್ದರಾಮಯ್ಯ ಬೈಯೋದು ಒಂದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. ಅವರು ಮುಖ್ಯಮಂತ್ರಿ ಆಗೋ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಘನತೆಗೆ ತಕ್ಕಂತೆ ಮಾತನಾಡಲಿ ಎಂದು ಶ್ರೀರಾಮುಲು ಹೇಳಿದರು.

ಸಿದ್ದರಾಮಯ್ಯ ಇತ್ತೀಚೆಗೆ ಹತಾಶೆಯಿಂದ ಮಾತನಾಡ್ತಿದ್ದಾರೆ. ಯಾವ ಪಾರ್ಟಿಯಲ್ಲೂ ಅವರು ನಿಯತ್ತಾಗಿ ಇಲ್ಲ. ಎಲ್ಲ ಮುಗಿಸಿ ಇದೀಗ ಕಾಂಗ್ರೆಸ್​ಗೆ ಬಂದಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಮತ್ತು ಡಿಕೆಶಿಯನ್ನು ಮುಗಿಸುತ್ತಾರೆ. ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಅವರನ್ನು ಬೈಯೋದು, ಸಂಘ ಪರಿವಾರವನ್ನು ಬೈಯುತ್ತಿದ್ದಾರೆ. ಸಿದ್ದರಾಮಯ್ಯ ಭಸ್ಮಾಸುರ, ಯಾರ ಮೇಲೆ ಕೈ ಇಡುತ್ತಾರೋ ಅವರು ಭಸ್ಮ ಆಗುತ್ತಾರೆ ಎಂದು ಟೀಕಿಸಿದರು.

ಇದನ್ನೂ ಓದಿ: 'ಬಿಜೆಪಿಯವರು ಸೀಳುನಾಯಿಯಂತೆ ಬರ್ತಾರೆ, ಆದ್ರೆ ನಮ್ಮವರೇ ನನ್ನ ಬೆಂಬಲಕ್ಕೆ ನಿಲ್ಲುವುದಿಲ್ಲ'

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.