ಗಂಗಾವತಿ : ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಮೇಲೆ ಭರತನಾಟ್ಯ ಕಲಾವಿದೆಯರ ತಂಡವೊಂದು ಶ್ರೀರಾಮಾಮೃತ ತರಂಗಿಣಿ ನಾಟ್ಯ ರೂಪಕ ಪ್ರಸ್ತುತಪಡಿಸಿತು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಸಂಸ್ಥೆಯೊಂದು ಅಭಿಯಾನ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ದೇಶದ 16 ಪವಿತ್ರ ನದಿಗಳ ಜಲ ಹಾಗೂ ಮೃತ್ತಿಕೆ (ಮಣ್ಣು) ಸಂಗ್ರಹಿಸಿ ಅಯೋಧ್ಯೆಗೆ ತಲುಪಿಸುವ ಗುರಿ ಇಟ್ಟುಕೊಂಡಿದೆ.
ಅಭಿಯಾನದ ಭಾಗವಾಗಿ ಆಯೋಜಿಸಲಾಗಿದ್ದ ಶ್ರೀರಾಮಾಮೃತ ತರಂಗಿಣಿ ಎಂಬ ಧಾರ್ಮಿಕ ಸಂಕಲ್ಪ ಕಾರ್ಯಕ್ರಮದಲ್ಲಿ ಹೊಸಪೇಟೆಯ ಅಂಜಲಿ ನಾಟ್ಯ ಕಲಾ ಕೇಂದ್ರದ ಕಲಾವಿದೆಯರು, ಹನುಮಾನ ಚಾಲೀಸಕ್ಕೆ ನಾಟ್ಯದ ಮೂಲಕ ರೂಪಕವಾದರು. ಇದಕ್ಕೂ ಮೊದಲು ಆನೆಗೊಂದಿಯಿಂದ ಕಲಾ ತಂಡಗಳ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.