ETV Bharat / state

ಲೆಕ್ಕ ಕೇಳಿದ್ರೆ ಬಿಜೆಪಿಗರು ಸಿಟ್ಟಿಗೇಳ್ತಾರೆ: ಶಿವರಾಜ ತಂಗಡಗಿ - shivaraj thangadagi

ಬಿಜೆಪಿಯವರು ಗ್ರಾಮ ಪಂಚಾಯಿತಿಯಿಂದ ಹಿಡಿದು ಕೇಂದ್ರ ಸರ್ಕಾರದವರೆಗೂ ಅವ್ಯವಹಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಕೇಳಿದರೆ ವಿಷಯಾಂತರ ಮಾಡುತ್ತಾರೆ. ಲೆಕ್ಕ ಕೇಳಿದರೆ ಬಿಜೆಪಿಯ ಎಲ್ಲರೂ ಸಿಟ್ಟಿಗೇಳುತ್ತಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಿ ದೂರಿದ್ದಾರೆ.

BJP is using the corona's time to Make money: Shivaraj thamgadagi
‘ಕೊರೊನಾ ಸಮಯವನ್ನು ಬಿಜೆಪಿ ದುಡ್ಡು ಹೊಡೆಯಲು ಬಳಸಿಕೊಳ್ಳುತ್ತಿದೆ’: ಶಿವರಾಜ್ ತಂಗಡಗಿ
author img

By

Published : Aug 8, 2020, 5:33 PM IST

ಕೊಪ್ಪಳ: ಲೆಕ್ಕ ಕೇಳಿದರೆ ಬಿಜೆಪಿಯ ಎಲ್ಲರೂ ಸಿಟ್ಟಿಗೇಳುತ್ತಾರೆ. ಆಗಿರುವ ಅವ್ಯವಹಾರದ ತನಿಖೆ ಮಾಡಿಸುವ ಧೈರ್ಯ ಬಿಜೆಪಿಯವರಿಗೆ ಇಲ್ಲ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಕಿಡಿಕಾರಿದ್ದಾರೆ.

ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಗ್ರಾಮ ಪಂಚಾಯಿತಿಯಿಂದ ಹಿಡಿದು ಕೇಂದ್ರ ಸರ್ಕಾರದವರೆಗೂ ಅವ್ಯವಹಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಕೇಳಿದರೆ ವಿಷಯಾಂತರ ಮಾಡುತ್ತಾರೆ. ಲೆಕ್ಕ ಕೇಳಿದರೆ ಬಿಜೆಪಿಯ ಎಲ್ಲರೂ ಸಿಟ್ಟಿಗೇಳುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ಆಗಿದ್ದ ಅವ್ಯವಹಾರದ ಕುರಿತು ನಾನು ಕೇಳಿದ್ದಕ್ಕೆ ಇಲ್ಲಿನ ಬಿಜೆಪಿ ಸಂಸದರು, ‌ಶಾಸಕರು ನನ್ನ ಆಸ್ತಿ ಎಷ್ಟಿದೆ ಎಂದು ಕೇಳುತ್ತಾರೆ. ಲೆಕ್ಕ ಕೊಡಲು ನಿಮಗೆ ಏನು ತೊಂದರೆ? ನಿಮಗೆ ಧೈರ್ಯವಿಲ್ಲವೆ ಎಂದು ಪ್ರಶ್ನಿಸಿದರು.

‘ಕೊರೊನಾ ಸಮಯವನ್ನು ಬಿಜೆಪಿ ದುಡ್ಡು ಹೊಡೆಯಲು ಬಳಸಿಕೊಳ್ಳುತ್ತಿದೆ’: ಶಿವರಾಜ್ ತಂಗಡಗಿ

ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಕೊರೊನಾ ತಡೆಗಟ್ಟಲು ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲ ಪಕ್ಷದ ನಾಯಕರನ್ನು ಕರೆದು ಸಭೆ ಮಾಡಬೇಕಿತ್ತು. ಆದರೆ ಆ ಕೆಲಸವನ್ನು ಉಸ್ತುವಾರಿ ಸಚಿವರು ಮಾಡಿಲ್ಲ. ಬಿಜೆಪಿ ಸರ್ಕಾರ ಕೊರೊನಾ ಸಂದರ್ಭವನ್ನು ದುಡ್ಡು ಹೊಡೆಯಲು, ರೈತ ವಿರೋಧಿ ಬಿಲ್ ಪಾಸ್ ಮಾಡಲು ಬಳಸಿಕೊಳ್ಳುತ್ತಿದೆ. ಆದರೆ ಜನರ ಪರವಾಗಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ತಾಲೂಕು ಮಟ್ಟದಿಂದಲೂ ವ್ಯಾಪಕ ಹೋರಾಟ ಮಾಡುವುದಾಗಿ ಮಾಜಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.