ಕೊಪ್ಪಳ: ಐತಿಹಾಸಿಕ ಕ್ಷೇತ್ರ ಅಂಜನಾದ್ರಿಯಿಂದ ಅಯೋಧ್ಯೆಗೆ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಜರಾಯಿ, ವಕ್ಪ್ ಹಾಗೂ ಹಜ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಅಂಜನಾದ್ರಿ ಶ್ರೀರಾಮ ಪರಮಭಕ್ತ ಆಂಜನೇಯನ ಜನ್ಮಸ್ಥಳ. ಹಾಗಾಗಿ ಇಲ್ಲಿಂದ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಿರೋದು ನನಗೆ ಖುಷಿಯಾಗಿದೆ. ಜಿಲ್ಲೆಯ ಉಸ್ತುವಾರಿ ನನಗಿಲ್ಲ. ಹಾಗಿದ್ದರೂ ಸರಕಾರ ನನಗೆ ವಹಿಸಿರುವ ಜವಾಬ್ದಾರಿ ನಿಭಾಯಿಸಿದ್ದೇನೆ ಎಂದು ಹೇಳಿದರು.
ಕಾಶಿಯಾತ್ರೆಗೆ ಭಾರತ್ ಗೌರವ ರೈಲು: ಮುಜರಾಯಿ ಇಲಾಖೆಯಿಂದ ಕಾಶಿಯಾತ್ರೆಗಾಗಿ 'ಭಾರತ್ ಗೌರವ' ರೈಲ್ವೇ ವ್ಯವಸ್ಥೆ ಮಾಡಲಾಗುತ್ತಿದೆ. ಬೆಂಗಳೂರು, ಕಾಶಿ, ಅಯೋಧ್ಯೆ ಹಾಗೂ ಪ್ರಯಾಗ್ರಾಜ್ವರೆಗೂ ಈ ರೈಲು ಸಂಚರಿಸಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯಪುರ: ಶಿವಲಿಂಗದಲ್ಲಿ ಅರಳಿದ ರಾಷ್ಟ್ರಧ್ವಜ