ETV Bharat / state

ಇಲ್ಲೊಂದು ಓಡದ ರೈಲು .. ಇದಕ್ಕೆ ಮಕ್ಕಳೇ ಪ್ರಯಾಣಿಕರು...!

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ರೈಲಿನ ಮಾದರಿಯಲ್ಲಿ ಪೇಂಟ್​ ಮಾಡಿಸಿ ಎಲ್ಲರ ಗಮನ ಸಳೆಯಲಾಗಿದೆ. ಈ ಶಾಲೆಗೆ ಆರು ಕೊಠಡಿಗಳಿವೆ. ಈ ಆರೂ ಕಟ್ಟಡಗಳಿಗೆ ಭಾರತೀಯ ರೈಲು ಮಾದರಿಯಲ್ಲಿ ಪೇಂಟ್​ ಮಾಡಲಾಗಿದೆ.

ಇಲ್ಲೊಂದು ಓಡದ ರೈಲು : ಇದಕ್ಕೆ ಮಕ್ಕಳೇ ಪ್ರಯಾಣಿಕರು...!
author img

By

Published : Jul 15, 2019, 11:44 PM IST

ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ರೈಲಿನ ಮಾದರಿಯಲ್ಲಿ ಪೇಂಟ್​ ಮಾಡಿಸಿ ಎಲ್ಲರ ಗಮನ ಸಳೆಯಲಾಗಿದೆ. ಈ ಶಾಲೆಗೆ ಆರು ಕೊಠಡಿಗಳಿವೆ. ಈ ಆರೂ ಕೊಠಡಿಗಳಿಗೆ ಭಾರತೀಯ ರೈಲು ಮಾದರಿಯಲ್ಲಿ ಪೇಂಟ್​ ಮಾಡಲಾಗಿದೆ.

ಇಲ್ಲೊಂದು ಓಡದ ರೈಲು.. ಇದಕ್ಕೆ ಮಕ್ಕಳೇ ಪ್ರಯಾಣಿಕರು...!

ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮೈಕ್ರೋ ಯೋಜನೆಯಡಿ ಸುಮಾರು 42. 68 ಲಕ್ಷ ರೂ. ಖರ್ಚು ಮಾಡಿ ಇಂತಹ ಭಿನ್ನ ರೀತಿಯ ಶಾಲಾ ಕಟ್ಟಡ ನಿರ್ಮಿಸಲಾಗಿದೆ.

ಮಕ್ಕಳಿಗೆ ಇಷ್ಟವಾಗುವ ರೀತಿ ಕಟ್ಟಡಕ್ಕೆ ಬಣ್ಣ ಬಳಿಯಬೇಕೆಂದು ಮೊದಲೇ ಶಿಕ್ಷಕರು ಏಜೆನ್ಸಿಗೆ ಮನವಿ ಮಾಡಿದ್ದು, ರೈಲಿನ ಮಾದರಿಯಲ್ಲಿ ಕಟ್ಟಡಕ್ಕೆ ಪೇಂಟಿಂಗ್ ಮಾಡಲಾಗಿದೆ. ಕಟ್ಟಡದ ಅಂದ ನೋಡಿದ ಮಕ್ಕಳು ಶಾಲೆಗೆ ಖುಷಿ ಖುಷಿಯಾಗಿ ಈಗ ಬರುತ್ತಿದ್ದಾರೆ ಎಂದು ಶಾಲಾ ಶಿಕ್ಷಕರು ಹೇಳುತ್ತಾರೆ.

Intro:

Body:ಕೊಪ್ಪಳ‌:- ಒಂದುಕಡೆ ಖಾಸಗಿ ಶಾಲೆಗಳ ಪ್ರಭಾವದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಅದೇ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ನಾನು ನಾನಾ ಪ್ರಯತ್ನ ನಡೆಯುತ್ತಿದ್ದು ಶಾಲಾ ಕಟ್ಟಡಗಳಿಗೆ ಮಾಡಿಸುತ್ತಿರುವ ಪೇಂಟಿಂಗ್ ನಿಂದ ಮಕ್ಕಳ ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಕೆಲ ಸರ್ಕಾರಿ ಶಾಲೆಗಳತ್ತ ಮಕ್ಕಳು ಇತ್ತೀಚಿಗೆ ಒಲವು ತೋರಿಸುತ್ತಿದ್ದಾರೆ. ಅಂತಹ ಪೇಂಟಿಂಗ್ ನಿಂದ ಕರಮುಡಿ ಗ್ರಾಮದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಗಮನ ಸೆಳೆಯುತ್ತಿದ್ದು, ಮಕ್ಕಳನ್ನು ಆಕರ್ಷಿಸುತ್ತಿದೆ.

ಹೌದು...., ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಈಗ ಆ ಗ್ರಾಮದ ಮಕ್ಕಳ ಆಕರ್ಷಣೆಯ ಕೇಂದ್ರವಾಗಿದೆ. ಇದಕ್ಕೆ ಕಾರಣ ನೂತನವಾಗಿ ನಿರ್ಮಿಸಲಾಗಿರುವ 6 ಕೊಠಡಿಗಳ ಶಾಲಾ ಕಟ್ಟಡಕ್ಕೆ ರೈಲ್ವೇ ಎಂಜಿನ್ ಹೊಂದಿರುವ ಬೋಗಿಗಳ ರೀತಿಯಲ್ಲಿ ಕಟ್ಟಡಕ್ಕೆ ರೇಲ್ವೆ ಮಾದರಿ ಪೇಂಟಿಂಗ್ ಮಾಡಿಸಲಾಗಿದೆ. ದೂರದಿಂದ ನೋಡಿದರೆ ಅಲ್ಲಿ ನಿಜವಾದ ರೈಲ್ವೆ ನಿಂತಿದೆಯೇನೋ ಎಂದು ಭಾಸವಾಗುತ್ತದೆ. ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮೈಕ್ರೋ ಯೋಜನೆಯಡಿ ಸುಮಾರು 42. 68 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮಕ್ಕಳನ್ನು ಸರ್ಕಾರಿ ಶಾಲೆಯ ಮತ್ತೆ ಸೆಳೆಯಲು ಶಿಕ್ಷಕರು ಮೊದಲೇ ರೈಲ್ವೆ ರೀತಿಯ ಪೇಂಟಿಂಗ್ ಮಾಡಿಕೊಡುವಂತೆ ಕಟ್ಟಡ ನಿರ್ಮಾಣ ಏಜೆನ್ಸಿಗೆ ಮನವಿ ಮಾಡಿಕೊಂಡಿದ್ದರಂತೆ. ಇದರಿಂದಾಗಿ ಈಗ ಕಟ್ಟಡ ಪೂರ್ಣಗೊಂಡಿದ್ದು ರೈಲ್ವೆ ಮಾದರಿಯಲ್ಲಿ ಕಟ್ಟಡಕ್ಕೆ ಪೇಂಟಿಂಗ್ ಮಾಡಲಾಗಿದೆ. ಶಾಲಾ ಕಟ್ಟಡಕ್ಕೆ ರೈಲ್ವೆ ರೀತಿಯಲ್ಲಿ ಪೇಂಟಿಂಗ್ ಮಾಡಿರುವುದರಿಂದ ಮಕ್ಕಳು ಶಾಲೆಗೆ ಬರಲು ಸಾಕಷ್ಟು ಆಸಕ್ತಿ ತೋರುತ್ತಿದ್ದಾರೆ. ಒಂದು ದಿನವೂ ಶಾಲೆಯನ್ನು ತಪ್ಪಿಸುತ್ತಿಲ್ಲ ಎಂದು ಶಿಕ್ಷಕ ಮುರ್ತುಜಾ ಅವರು ಸಂತಸ ವ್ಯಕ್ತಪಡಿಸುತ್ತಾರೆ. ಇದರಿಂದ ಶಾಲೆಯ ದಾಖಲಾತಿಯು ಹೆಚ್ಚುತ್ತಿದೆ ಎನ್ನುತ್ತಾರೆ ಅವರು.

ಬೈಟ್1:- ಮುರ್ತುಜಾ, ಕರಮುಡಿ ಸರ್ಕಾರಿ ಶಾಲೆಯ ಶಿಕ್ಷಕ.

ಒಂದನೇ ತರಗತಿಯಿಂದ 8 ನೇ ತರಗತಿವರೆಗೆ ಇರುವ ಈ ಸರ್ಕಾರಿ ಶಾಲೆಯಲ್ಲಿ ಸುಮಾರು 380 ರಷ್ಟು ವಿದ್ಯಾರ್ಥಿಗಳಿದ್ದಾರೆ. ಶಾಲಾ ಕಟ್ಟಡಕ್ಕೆ ರೈಲ್ವೆ ರೀತಿಯಲ್ಲಿ ಪೇಂಟಿಂಗ್ ಮಾಡಿಸಿರುವುದರಿಂದ ತಾವು ರೈಲ್ವೆಯಲ್ಲೇ ಕುಳಿತು ಪ್ರಯಾಣ ಮಾಡುತ್ತಿದ್ದೇವೆ ಎನ್ನುವ ರೀತಿಯಲ್ಲಿ ಮಕ್ಕಳಿಗೆ ಫೀಲಿಂಗ್ ಆಗುತ್ತಿದೆ. ಈ ಶಾಲೆಗೆ ಬರಲು ಈಗ ಬಹಳ ಖುಷಿಯಾಗುತ್ತಿದೆ. ನಾವು ರೈಲ್ವೆಯಲ್ಲಿ ಈವರೆಗೂ ಪ್ರಯಾಣ ಮಾಡಿಲ್ಲ. ಆದರೆ ನಮ್ಮ ಶಾಲಾ ಕಟ್ಟಡಕ್ಕೆ ರೈಲ್ವೆ ರೀತಿಯಲ್ಲಿ ಪೇಂಟಿಂಗ್ ಮಾಡಿರುವುದರಿಂದ ರೇಲ್ವೆಯಲ್ಲಿ ಕುಳಿತಿದ್ದೇವೆ ಎನ್ನುವಂತಾಗುತ್ತದೆ ಎಂದು ಖುಷಿ ವ್ಯಕ್ತಪಡಿಸುತ್ತಾಳೆ ವಿದ್ಯಾರ್ಥಿನಿ ಪ್ರಿಯಾಂಕ.

ಬೈಟ್2:- ಪ್ರಿಯಾಂಕ, ವಿದ್ಯಾರ್ಥಿನಿ.

ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಈ ರೀತಿಯಾದ ಸೃಜನಾತ್ಮಕ ಯೋಜನೆಗಳು ಮತ್ತು ಯೋಚನೆಗಳು ವರ್ಕೌಟ್ ಎಂಬುದಕ್ಕೆ ಈ ರೀತಿಯಾಗಿ ಪೇಂಟಿಂಗ್ ಮಾಡಿಸಿದ ಶಾಲೆಗಳಲ್ಲಿ ಮಕ್ಕಳ ಖುಷಿ ನೋಡಿದರೆ ಗೊತ್ತಾಗುತ್ತದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.