ಕೊಪ್ಪಳ: ಕೆಸರುಗದ್ದೆಯಂತಾಗಿರುವ ಜಿಲ್ಲೆಯ ಕುಷ್ಟಗಿ ತಾಲೂಕಿನ ಹೊಮ್ಮಿನಾಳ ಗ್ರಾಮದ ರಸ್ತೆಯಲ್ಲಿ ಖಾಸಗಿ ಶಾಲೆಯ ವಾಹನವೊಂದು ಕೆಸರು ರಸ್ತೆಯಲ್ಲಿ ಸಿಲುಕಿಕೊಂಡು ಹೊರಬರಲು ಹೆಣಗಾಡಿದ ಘಟನೆ ನಡೆದಿದೆ.
ಕೆಸರಿನಲ್ಲಿ ಸಿಲುಕಿದ ಶಾಲಾವಾಹನವನ್ನು ಹೊರ ತೆಗೆಯಲು ಗ್ರಾಮಸ್ಥರು ಹರಸಾಹಸ ಪಟ್ರು. ಕೊನೆಗೆ ಜೆಸಿಬಿ ಮೂಲಕ ಶಾಲಾ ಬಸ್ ಅನ್ನು ಹೊರತೆಗೆಯಲಾಯ್ತು. ಪ್ರತಿನಿತ್ಯ ಈ ರಸ್ತೆಯಲ್ಲಿ ವಾಹನ ಚಾಲಕರು ಜೀವ ಕೈನಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ರಸ್ತೆ ಇಷ್ಟೊಂದು ಖರಾಬ್ ಆಗಿದ್ರೂ ಈ ಗ್ರಾಮದ ಜನರ ಗೋಳು ಕೇಳೋರಿಲ್ಲ.
ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುವ ಈ ರಸ್ತೆ ದುರಸ್ತಿ ಮಾಡುವಂತೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.