ETV Bharat / state

ಸಾವರ್ಕರ್​, ಸಿದ್ದಗಂಗಾ ಶ್ರೀ ಇಬ್ಬರೂ ಭಾರತ ರತ್ನಕ್ಕೆ ಅರ್ಹರು: ಡಿಸಿಎಂ ಸವದಿ - ಸಾವರ್ಕರ್​ ಕುರಿತು ಡಿಸಿಎಂ ಲಕ್ಷ್ಮಣ ಸವದಿ ಮಾತು

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಸಾವರ್ಕರ್ ಅವರು ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಅತ್ಯಂತ ಕಠೋರ ಶಿಕ್ಷೆ ಅನುಭವಿಸಿದ್ದಾರೆ. ಅಂತಹವರಿಗೆ ಭಾರತ ರತ್ನ ಕೊಡುವುದು ದೇಶಕ್ಕೆ ಗೌರವ. ಅಂತಹವರನ್ನು ಹಿಯಾಳಿಸಿದರೆ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ‌ ಮಾಡಿದಂತೆ. ಸಾವರ್ಕರ್ ಅವರಿಗೆ ಕಾಂಗ್ರೆಸ್ ನವರು ಅಪಮಾನ ಮಾಡುತ್ತಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಕಿಡಿಕಾರಿದರು.

ಸಾವರ್ಕರ್​, ಸಿದ್ದಗಂಗಾ ಶ್ರೀ ಇಬ್ಬರೂ ಭಾರತ ರತ್ನಕ್ಕೆ ಅರ್ಹರು: ಸವದಿ
author img

By

Published : Oct 21, 2019, 2:27 PM IST

ಕೊಪ್ಪಳ: ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವುದು ದೇಶಕ್ಕೆ ಗೌರವ. ಇನ್ನು ಸಿದ್ಧಗಂಗಾ ಶ್ರೀಗಳಿಗೂ ಭಾರತರತ್ನ ಪ್ರಶಸ್ತಿ ಕೊಡಲು ಕೇಂದ್ರ ಸರ್ಕಾರಕ್ಕೆ ನಾವು ಮನವಿ ಮಾಡುತ್ತೇವೆ. ಇದರಲ್ಲಿ ಎರಡು ಮಾತಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಸಾವರ್ಕರ್​, ಸಿದ್ದಗಂಗಾ ಶ್ರೀ ಇಬ್ಬರೂ ಭಾರತ ರತ್ನಕ್ಕೆ ಅರ್ಹರು: ಸವದಿ

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಸಾವರ್ಕರ್ ಅವರು ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಅತ್ಯಂತ ಕಠೋರ ಶಿಕ್ಷೆ ಅನುಭವಿಸಿದ್ದಾರೆ. ಅಂತಹವರಿಗೆ ಭಾರತ ರತ್ನ ಕೊಡುವುದು ದೇಶಕ್ಕೆ ಗೌರವ. ಅಂತಹವರನ್ನು ಹಿಯಾಳಿಸಿದರೆ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ‌ ಮಾಡಿದಂತೆ. ಸಾವರ್ಕರ್ ಅವರಿಗೆ ಕಾಂಗ್ರೆಸ್ ನವರು ಅಪಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಸಿದ್ದಗಂಗಾ ಶ್ರೀಗಳಿಗೆ ಇಂದಲ್ಲ ನಾಳೆ ಭಾರತ ರತ್ನ ಪ್ರಶಸ್ತಿ ಬರತ್ತದೆ. ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ಕೊಡಲು ಕೇಂದ್ರ ಸರ್ಕಾರಕ್ಕೆ ನಾವು ಮನವಿ ಮಾಡುತ್ತೇವೆ. ಇದರಲ್ಲಿ ಎರಡು ಮಾತಿಲ್ಲ ಎಂದು ಭರವಸೆ ನೀಡಿದರು.

ಅನರ್ಹ ಶಾಸಕರ ಬಿಜೆಪಿ ಸೇರ್ಪಡೆ ಕುರಿತು ಮಾತನಾಡಿದ ಅವರು, ಅನರ್ಹ ಶಾಸಕರು ಇನ್ನೂ ಬಿಜೆಪಿ ಸೇರಿಲ್ಲ. ಅವರ ಅನರ್ಹತೆಯ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ಕೇಸ್ ಮುಗಿದ ಮೇಲೆ ಅವರು ನಮ್ಮ ಪಕ್ಷಕ್ಕೆ ಬರ್ತಾರೋ ಇಲ್ಲವೋ ಎಂಬುದು ತಿಳಿಯುತ್ತೆ ಎಂದರು.‌

ನೀವು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಣ ಸವದಿ, ನನಗೆ ಯಾವ ಭವಿಷ್ಯ ಗೊತ್ತಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.

ಇದೇ ವೇಳೆ, ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ದೇವೇಂದ್ರ ಫಡ್ನವಿಸ್ ಅವರು ಮತ್ತೆ ಮುಖ್ಯಮಂತ್ರಿಯಾಗ್ತಾರೆ. ನಾನು ಮಹಾರಾಷ್ಟ್ರದ ಐದು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ. ಖಂಡಿತವಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮಹಾರಾಷ್ಟ್ರದಲ್ಲಿ ನಾವು 220 ಸ್ಥಾನಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾದಾಯಿ ವಿವಾದ ವಿಚಾರವಾಗಿ ಮಾತನಾಡಿದ ಅವರು, ಮಹದಾಯಿ ವಿಷಯ ರಾಜ್ಯಪಾಲರ ವ್ಯಾಪ್ತಿಗೆ ಬರುವುದಿಲ್ಲ. ಮಹಾರಾಷ್ಟ್ರ, ಗೋವಾ ಮುಖ್ಯಮಂತ್ರಿಗಳು ಮಾತುಕತೆಗೆ ಸಿದ್ದರಾಗಿದ್ದರು. ಆದರೆ, ಗೋವಾದ ವಿರೋಧ ಪಕ್ಷದವರು ಮಾತುಕತೆಗೆ ವಿರೋಧ ಮಾಡಿದ್ದರು. ಕಾಂಗ್ರೆಸ್ ಪಕ್ಷ ಹೋರಾಟ ಮಾಡುವುದಾಗಿ ವಿರೋಧ‌ ಮಾಡಿದ ಕಾರಣ ಸಭೆ ಮುಂದೂಡಲಾಗಿದೆ. ನಾವು ಇನ್ನೊಮ್ಮೆ ಸಭೆ ಮಾಡಿ, ಮಹದಾಯಿ ಸಮಸ್ಯೆ ಇತ್ಯರ್ಥ ಮಾಡುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಇದೇ ವೇಳೆ ಭರವಸೆ ನೀಡಿದರು.

Intro:Body:ಕೊಪ್ಪಳ:-ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡೋದು ದೇಶಕ್ಕೆ ಗೌರವ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಸಾವರ್ಕರ್ ಅವರು ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಅತ್ಯಂತ ಕಠೋರ ಶಿಕ್ಷೆ ಅನುಭವಿಸಿದ್ದಾರೆ. ಅಂತವರಿಗೆ ಭಾರತ ರತ್ನ ಕೊಡುವುದು ದೇಶಕ್ಕೆ ಗೌರವ. ಅಂತವರನ್ನು ಹಿಯಾಳಿಸಿದರೆ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ‌ ಮಾಡಿದಂತೆ. ಸಾವರ್ಕರ್ ಅವರಿಗೆ ಕಾಂಗ್ರೆಸ್ ನವರು ಅಪಮಾನ ಮಾಡುತ್ತಿದ್ದಾರೆ. ಇನ್ನು ಸಿದ್ದಗಂಗಾ ಶ್ರೀಗಳಿಗೆ ಇಂದಲ್ಲ ನಾಳೆ ಭಾರತ ರತ್ನ ಪ್ರಶಸ್ತಿ ಬರತ್ತದೆ. ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ಕೊಡಲು ಕೇಂದ್ರ ಸರ್ಕಾರಕ್ಕೆ ನಾವು ಮನವಿ ಮಾಡುತ್ತೇವೆ. ಇದರಲ್ಲಿ ಎರಡು ಮಾತಿಲ್ಲ ಎಂದರು. ಅನರ್ಹ ಶಾಸಕರು ಇನ್ನೂ ಬಿಜೆಪಿ ಸೇರಿಲ್ಲ. ಅವರ ಅನರ್ಹತೆಯ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಕೇಸ್ ಮುಗಿದ ಮೇಲೆ ಅವರು ನಮ್ಮ ಪಕ್ಷಕ್ಕೆ ಬರ್ತಾರೆ ಇಲ್ಲವೋ ಎಂಬುದು ಗೊತ್ತಿಲ್ಲ ಎಂದರು.‌ ನೀವು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಣ ಸವದಿ ಅವರು, ನನಗೆ ಯಾವ ಭವಿಷ್ಯ ಗೊತ್ತಿಲ್ಲ ಎಂದರು. ಇನ್ನು ಮತ್ತೆ ರಾಜ್ಯದಲ್ಲಿ ಪ್ರವಾಹ ಭೀತಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಭಗವಂತನಲ್ಲಿ ಪ್ರಾರ್ಥನೆ ಮಾಡೋಣ. ಬಹಳ ಕಷ್ಟ ಕೊಡಬೇಡ ಎಂದು. ಆದರೆ, ಬಂದಿರುವ ಹಾಗೂ ಬರುವ ಪ್ರವಾಹವನ್ನು ಸಮರ್ಥವಾಗಿ ನಿಭಾಯಿಸುವುದು ನಮ್ಮೆಲ್ಲರ ಕರ್ತವ್ಯ. ಇನ್ನು ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ದೇವೇಂದ್ರ ಫಡ್ನವಿಸ್ ಅವರು ಮತ್ತೆ ಮುಖ್ಯಮಂತ್ರಿಯಾಗ್ತಾರೆ.
ನಾನು ಮಹಾರಾಷ್ಟ್ರದ ಐದು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ. ಖಂಡಿತವಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮಹಾರಾಷ್ಟ್ರದಲ್ಲಿ ನಾವು
220 ಸ್ಥಾನಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು. ಇನ್ನು ರಾಜ್ಯದಲ್ಲಿ ಇನ್ನೂ ಮೂರುವರೆ ವರ್ಷ ನಮ್ಮ ಪಕ್ಷ ಅಧಿಕಾರದಲ್ಲಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹಾದಾಯಿ ವಿಷಯ ರಾಜ್ಯಪಾಲರ ವ್ಯಾಪ್ತಿಗೆ ಬರುವುದಿಲ್ಲ. ಮಹಾರಷ್ಟ್ರ, ಗೋವಾ ಮುಖ್ಯಮಂತ್ರಿಗಳು ಮಾತುಕತೆಗೆ ಸಿದ್ದರಾಗಿದ್ದರು. ಗೋವಾದ ವಿರೋಧ ಪಕ್ಷದವರು ಮಾತುಕತೆಗೆ ವಿರೋಧ ಮಾಡಿದ್ದರು. ಕಾಂಗ್ರೆಸ್ ಪಕ್ಷ ಹೋರಾಟ ಮಾಡುವುದಾಗಿ ವಿರೋಧ‌ ಮಾಡಿದ ಕಾರಣ ಸಭೆ ಮುಂದೂಡಲಾಗಿದೆ. ನಾವು ಇನ್ನೊಮ್ಮೆ ಸಭೆ ಮಾಡಿ, ಮಹಾದಾಯಿ ಸಮಸ್ಯೆ ಇತ್ಯರ್ಥ ಮಾಡುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಬೈಟ್1:- ಲಕ್ಷ್ಮಣ ಸವದಿ, ಡಿಸಿಎಂ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.