ETV Bharat / state

Next  ನಾನೇ ಸಿಎಂ ಅಂತಾ Siddu ಕನಸು ಕಾಣ್ತಿದ್ದರೆ, DKS ಹುದ್ದೆಗಾಗಿ ಕಾಯ್ತಾನೇ ಇದ್ದಾರೆ: ಸಂಗಣ್ಣ ಕರಡಿ

ಸಿದ್ದರಾಮಯ್ಯರ ಆಪ್ತರು ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಬಿಂಬಿಸುತ್ತಿದ್ದಾರೆ. ಸಿಎಂ ಖುರ್ಚಿಗೆ ಡಿ.ಕೆ. ಶಿವಕುಮಾರ್ ಬಹಳ ದಿನಗಳಿಂದ ಕಾಯುತ್ತಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

author img

By

Published : Jun 22, 2021, 7:09 PM IST

sanganna karadi
ಸಂಸದ ಸಂಗಣ್ಣ ಕರಡಿ

ಕೊಪ್ಪಳ: ಕಾಂಗ್ರೆಸ್​ನಲ್ಲಿ ಸಿಎಂ ಖುರ್ಚಿಗೆ ಡಿ.ಕೆ. ಶಿವಕುಮಾರ್ ಬಹಳ ದಿನಗಳಿಂದ ಕಾಯುತ್ತಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರ ಆಪ್ತರು ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಬಿಂಬಿಸುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೇ ಬಿಡ್ತೀನಿ ಎಂದು ಕನಸು ಕಾಣುತ್ತಿದ್ದಾರೆ. ಆದರೆ ಅಂತಿಮವಾಗಿ ಜನರು ತೀರ್ಮಾನ ಮಾಡುತ್ತಾರೆ ಎಂದರು.

ಸಂಸದ ಸಂಗಣ್ಣ ಕರಡಿ

ಸಿದ್ದರಾಮಯ್ಯ ಸಿಎಂ ಆಗಬೇಕು ಅಂದರೂ ಸಿಎಂ ಆಗಲ್ಲ, ಪಕ್ಷಕ್ಕೆ ಬಹುಮತ ಬಂದ ನಂತರ ಆ ಪಕ್ಷದ ಶಾಸಕರು ತೀರ್ಮಾನ ಮಾಡುತ್ತಾರೆ. ಸಿದ್ದರಾಮಯ್ಯ ಆಪ್ತರು ಈಗಲೇ‌ ಮುಂದಿನ ಸಿಎಂ ಸಿದ್ದರಾಮಯ್ಯ ಅಂತಾ ಹೇಳುತ್ತಿದ್ದಾರೆ. ಇದನ್ನು ನೋಡಿದರೆ ಮತದಾರರನ್ನು ಖರೀದಿ ಮಾಡಿದ ತರಹ ಕಾಣುತ್ತಿದೆ ಎಂದರು.‌

ಇದನ್ನೂ ಓದಿ:ಚಲನಚಿತ್ರ, ಕಿರುತೆರೆ ರಂಗದವರಿಗೆ ಆರ್ಥಿಕ ನೆರವು: ಸೇವಾಸಿಂಧು ಪೋರ್ಟಲ್​ನಲ್ಲಿ ಅರ್ಜಿ ಆಹ್ವಾನ

ಬಿಜೆಪಿಯವರು ಸರ್ಕಾರದ ಹಣದಿಂದ ಕಿಟ್ ಹಂಚಿದ್ದಾರೆ ಎನ್ನುವುದು ಸಮಂಜಸವಲ್ಲ. ರಾಜಕಾರಣಿಗಳ್ಯಾರೂ ಮನೆಯಿಂದ ಹಣ ಹಾಕುವುದಿಲ್ಲ ಎಂದರು. ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಸಿದ್ದರಾಮಯ್ಯ ನಡುವೆ ಏನು ಇದೆ ಅನ್ನೋದನ್ನು ಮುಂದೆ ಮಾತಾಡುತ್ತೇನೆ. ಅವರಿಗೆ ಎಲ್ಲಿಂದ ದುಡ್ಡ ಬರುತ್ತೆ, ಏನು ಅಂತಾ ಮುಂದಿನ ದಿನಗಳಲ್ಲಿ ಮಾತಾಡುತ್ತೇನೆ.

ರಾಯರಡ್ಡಿ ಅವರಿಗೆ ಸಿದ್ದರಾಮಯ್ಯ ಮೇಲೆ ಯಾಕೆ ಲವ್ ಆಗಿದೆ ಅಂತಾ ಗೊತ್ತಿಲ್ಲ. ಸಿದ್ದರಾಮಯ್ಯ ಲೋಕಸಭಾ ಚುನಾವಣೆಯಲ್ಲಿ ಸೋತಾಗ ರಾಯರೆಡ್ಡಿ ಬಗ್ಗೆ ಮಾತಾಡಿದ್ದರು. ಆದ್ರೆ ಇವತ್ಯಾಕೆ ರಾಯರೆಡ್ಡಿ ಅವರಿಗೆ ಲವ್ ಆಗಿದೆ ಅನ್ನೋದು ಗೊತ್ತಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.