ಕೊಪ್ಪಳ: ಗಂಗಾವತಿಗೆ ಆಗಮಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರಿಯವರಿಗೆ ಸನ್ಮಾನವನ್ನು ಮಾಡಲಾಯಿತು. ಕೃಷಿ ಉಪಕರಣಗಳ ಮಾರಾಟ ಮಾಡಲು ದಾವಣಗೆರೆಯವರಾದ ವೀರಾಚಾರಿಯವರು ಸಿಂಧನೂರಿಗೆ ತೆರಳಿದ್ದರು. ಆದರೆ, ಅವರ ಕೃಷಿ ಪರಿಕರಗಳಿದ್ದ ವಾಹನದಲ್ಲಿ ತಾಂತ್ರಿಕ ಸಮಸ್ಯೆಯಿಂದ ಅವರು ಗಂಗಾವತಿಯಲ್ಲಿಯೇ ಉಳಿದುಕೊಳ್ಳ ಬೇಕಾಯಿತು.
ಈ ವೇಳೆ ದಂತ ವೈದ್ಯ ಶಿವಕುಮಾರ ಸ್ಥಳಕ್ಕೆ ತೆರಳಿ ವೀರಾಚಾರಿ ಅವರನ್ನು ಮನೆಗೆ ಕರೆತಂದು ಸ್ನೇಹಿತರೊಂದಿಗೆ ಸೇರಿ ಆತ್ಮೀಯವಾಗಿ ಸನ್ಮಾನಿಸಿದರು. ಜತೆಗೆ ರಾತ್ರಿ ತಮ್ಮ ಮನೆಯಲ್ಲಿ ತಂಗಲು ಅವಕಾಶ ನೀಡಿ ಅವರೊಂದಿಗಿನ ಅನುಭವಗಳನ್ನು ಸ್ನೇಹಿತರು ಹಂಚಿಕೊಂಡರು.