ಕೊಪ್ಪಳ: ತಾಲೂಕಿನ ಹಲಿಗೇರಿ ಗ್ರಾಮದ ದೀಪಾ ಅಲಿಯಾಸ್ ಅನ್ನಪೂರ್ಣಮ್ಮ (27) ಎಂಬ ಮಹಿಳೆ ಮತ್ತು ಹುಲಗಿ ಗ್ರಾಮದ ತಿಪ್ಪೇಶ ಕುಂಕುಮಗಾರರ ಮಗಳು ಭವಾನಿ (12) ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಗ್ರಾಮೀಣ ಠಾಣೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮಹಿಳೆಯು ನವೆಂಬರ್ 30ರಂದು ಸಂಜೆ ಹಲಗೇರಿ ಗ್ರಾಮದ ಬಸ್ ನಿಲ್ದಾಣದ ಹತ್ತಿರದ ಶೌಚಾಲಯಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಈವರೆಗೂ ವಾಪಾಸ್ ಬಂದಿಲ್ಲ. ಕಾಣೆಯಾದ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08539-285233 ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮುನಿರಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯ ಹುಲಗಿ ಗ್ರಾಮದ ತಿಪ್ಪೇಶ ಕುಂಕುಮಗಾರರ ಮಗಳು ಭವಾನಿ (12) ಎಂಬ ಬಾಲಕಿ ನವೆಂಬರ್ 27 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಬಾಲಕಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಎಸ್ಪಿ ಕಚೇರಿ ದೂರವಾಣಿ ಸಂಖ್ಯೆ 08539-230111 ಅಥವಾ ಸಿಪಿಐ ಅವರ 9480803731 ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.