ETV Bharat / state

ದೇಶದಲ್ಲಿ ನಡೆಯುತ್ತಿರುವ ಕೋಮು ಗಲಭೆಗೆ RSS ಕಾರಣ: ಅಮರೇಗೌಡ ಬಯ್ಯಾಪುರ

ಆರ್‌ಎಸ್‌ಎಸ್‌ ದೇಶದಲ್ಲಿ ಹಿಂದೂ, ಮುಸ್ಲಿಂ ಸಮುದಾಯದ ಮಧ್ಯೆ ಕೋಮು ಗಲಭೆ ಸೃಷ್ಟಿಸುತ್ತಿದೆ ಎಂದು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಅಮರೇಗೌಡ ಬಯ್ಯಾಪುರ ಆರೋಪಿಸಿದರು.

ಅಮರೇಗೌಡ ಬಯ್ಯಾಪುರ
ಅಮರೇಗೌಡ ಬಯ್ಯಾಪುರ
author img

By

Published : May 30, 2022, 7:06 AM IST

ಗಂಗಾವತಿ: ರಾಜ್ಯ ಮತ್ತು ದೇಶದಲ್ಲಿ ನಡೆಯುತ್ತಿರುವ ಎಲ್ಲ ಕೋಮುಪ್ರೇರಿತ ಗಲಭೆ, ಗಲಾಟೆಗಳಿಗೆ ಆರ್​ಎಸ್​ಎಸ್ ಮೂಲ ಕಾರಣ ಎಂದು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಆರೋಪಿಸಿದರು. ತಾಲೂಕಿನ ಆನೆಗೊಂದಿ ಸಮೀಪದ ಪಂಪಾ ಸರೋವರಕ್ಕೆ ಭಾನುವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಿಜಾಬ್, ಮಸೀದಿಗಳಲ್ಲಿ ಮೈಕ್​ ಬಳಕೆಯ ವಿವಾದಗಳು ಮುನ್ನೆಲೆಗೆ ಬರುತ್ತಿವೆ. ಮೈಕ್​ ಸಮಸ್ಯೆ ಸಮಸ್ಯೆಯೇ ಅಲ್ಲ. ಎಲ್ಲ ದೇವಸ್ಥಾನಗಳಲ್ಲಿಯೂ ವಿಶೇಷ ಸಂದರ್ಭದಲ್ಲಿ ಮೈಕ್​, ಡಿಜೆ ಹಾಕುತ್ತಾರೆ. ಪ್ರತಿಯೊಂದು ವಿಚಾರದಲ್ಲಿ ಕೋಮುಪ್ರೇರಿತ ದ್ವೇಷಕ್ಕೆ ಅವಕಾಶ ನೀಡಬಾರದು. ಮುಂದಿನ ದಿನಗಳಲ್ಲಿ ಮೋದಿ ಆ್ಯಂಡ್ ಟೀಂ ಸೋಲಿಸುವ ಮೂಲಕ ಜನ ಬಿಜೆಪಿಯನ್ನು ಮೂಲೆಗುಂಪು ಮಾಡಲಿದ್ದಾರೆ ಎಂದರು.

ಸೋನಿಯಾ ಗಾಂಧಿಯನ್ನು ಇಟಲಿ ಮೂಲದವರು ಎನ್ನುವುದು ಸರಿಯಲ್ಲ. ಭಾರತದ ಪ್ರಜೆಯೊಂದಿಗೆ ವಿವಾಹವಾದ ಮೇಲೆ ಆಕೆ ಭಾರತೀಯ ಪ್ರಜೆ. ಬಿಜೆಪಿಯಲ್ಲೂ ಇಂತಹ ಹಲವು ಪ್ರಕರಣಗಳಿವೆ. ಮುಂದಿನ ದಿನಗಳಲ್ಲಿ ಹೆಕ್ಕಿ ತೆಗೆಯುವ ಕೆಲಸ ಆಗಬಹುದು ಎಂದು ಹೇಳಿದರು.

ಇದನ್ನೂ ಓದಿ: ಕರ್ನಾಟಕದಿಂದ ರಾಜ್ಯಸಭೆಗೆ ಜೈರಾಮ್ ರಮೇಶ್ ಕಾಂಗ್ರೆಸ್ ಅಭ್ಯರ್ಥಿ: ಹೈಕಮಾಂಡ್​ನಿಂದ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.