ಗಂಗಾವತಿ (ಕೊಪ್ಪಳ): ಕೊರೊನಾ ಮಹಾಮಾರಿ ತಡೆಯಲು ವೈದ್ಯಕೀಯ ಕ್ಷೇತ್ರದಲ್ಲಿ ಲಸಿಕೆಗಳ ಅಭಿವೃದ್ಧಿಯಾಗಿದ್ದು ಯಶಸ್ವಿಯೂ ಆಗಿದೆ. ಆದರೆ ಕೋವಿಡ್ ಕಟ್ಟಿಹಾಕಲು ಮನೆಯಲ್ಲಿಯೇ ರಾಮಬಾಣದಂತ ಅತೀ ಸರಳ ಉಪಾಯಕ್ಕೆ ಜನ ಮೊರೆ ಹೋಗುತ್ತಿದ್ದು, ಇದಕ್ಕೆ ವೈದ್ಯರೂ ಕೂಡ ಅಂಗೀಕಾರದ ಮುದ್ರೆಯೊತ್ತಿದ್ದಾರೆ.
ಭತ್ತ ಬೆಳೆಯುವ ನಾಡೆಂದು ಗುರುತಿಸಿಕೊಂಡಿರುವ ಗಂಗಾವತಿಯಲ್ಲಿ ಇದೀಗ ಅಕ್ಕಿ ತೊಳೆದು ನೀರು ಕುಡಿಯುವ ಹೊಸ ಟ್ರೆಂಡ್ ಶುರುವಾಗಿದೆ. ಇದರಿಂದ ಕೊರೊನಾವನ್ನು ಕಟ್ಟಿಹಾಕಬಹುದು ಎಂಬುದು ಜನರ ನಂಬಿಕೆಯಾಗಿದೆ. ಇದಕ್ಕೆ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವುಡಿ ಸಹ ಸಹಮತ ಸೂಚಿಸಿದ್ದು, ಅಕ್ಕಿ ನೀರು ಸೇವೆನೆಯಿಂದ ಸಹಜವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದಿದ್ದಾರೆ.
ಅಕ್ಕಿ ನೀರಿನಲ್ಲಿ ಕ್ಯಾಲ್ಸಿಯಂ ಅಂಶ ಇರುವ ಕಾರಣಕ್ಕೆ ಸಹಜವಾಗಿ ಕೆಮ್ಮು, ನೆಗಡಿ, ಜ್ವರ ಮತ್ತು ವೈರಾಣುಗಳಿಂದ ಉಂಟಾಗಬಹುದಾದ ಬೇರೆ ಯಾವುದೇ ಸೋಂಕು ತಗಲುವುದಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಹೀಗಾಗಿ ನಗರದಲ್ಲೀಗ ಗೃಹಿಣಿಯರು ಅಕ್ಕಿ ತೊಳೆದ ಬಳಿಕ ಆ ನೀರನ್ನೇ ಕೊರೊನಾ ಔಷಧದಂತೆ ಬಳಕೆ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.