ಗಂಗಾವತಿ: ಕೊರೊನಾ ಸಂತ್ರಸ್ತರಿಗೆ ನೆರವಾಗುವ ಉದ್ದೇಶಕ್ಕೆ ಸರ್ಕಾರದ ಕೋರಿಕೆಗೆ ಸ್ಪಂದಿಸಿದ ಇಲ್ಲಿನ ಅಕ್ಕಿ ಗಿರಣಿ ಮಾಲೀಕರ ಸಂಘದ ನಿರ್ದೇಶಕರು, ಸಭೆ ಸೇರಿ ಒಂದು ಲೋಡ್ ಅಕ್ಕಿಯನ್ನು ಕೊಪ್ಪಳ ಜಿಲ್ಲಾಧಿಕಾರಿಗೆ ಕಳಿಸಿದರು.
ಸಂಘದಿಂದ ಸಂಗ್ರಹಿಸಲಾಗಿದ್ದ ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಒಂದು ಲೋಡ್ ಲಾರಿ ಅಂದರೆ 14.1 ಟನ್ ತೂಕದ ಅಕ್ಕಿಯನ್ನು ಇಲ್ಲಿನ ಎಪಿಎಂಸಿ ಕಚೇರಿಯಿಂದ ಕಳಿಸಲಾಯಿತು.
ವಿತರಣೆಗೆ ಸುಲಭವಾಗಲಿ ಎಂಬ ಕಾರಣಕ್ಕೆ ತಲಾ 25 ಕೆ.ಜಿಯ 554 ಪ್ಯಾಕೆಟ್ ಅಕ್ಕಿಯನ್ನು ನಾನಾ ಬ್ರ್ಯಾಂಡಿನ ಉತ್ತಮ ಗುಣಮಟ್ಟದ ಸೋನಾ ಮಸೂರಿಯನ್ನು ಅಕ್ಕಿ ಗಿರಣಿ ಮಾಲೀಕರು ಕಳಿಸಿಕೊಟ್ಟರು. ಇನ್ನು ಮಾಲೀಕರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.