ETV Bharat / state

ಹಂಪಿ ಪ್ರಾಧಿಕಾರದಿಂದ ಮತ್ತೊಮ್ಮೆ ರೆಸಾರ್ಟ್​ ತೆರವು ಕಾರ್ಯಾಚರಣೆ - Resort Clearance Operation by Hampi Authority

ಗಂಗಾವತಿಯಲ್ಲಿ ಅನಧಿಕೃತ ರೆಸಾರ್ಟ್​ಗಳು ತಲೆ ಎತ್ತಿದ್ದು, ನೆಲಸಮಕ್ಕೆ ಈಗಾಗಲೇ ಸಂಬಂಧಿತರಿಗೆ ನೋಟಿಸ್​ ನೀಡಲಾಗಿದೆ ಎಂದು ಸಹಾಯಕ ಆಯುಕ್ತ ಸಿದ್ಧರಾಮೇಶ್ವರ ಸ್ಪಷ್ಟಪಡಿಸಿದ್ದಾರೆ.

resort-clearance-operation-once-again-by-hampi-authority
ಹಂಪಿ ಪ್ರಾಧಿಕಾರದಿಂದ ಮತ್ತೊಮ್ಮೆ ರೆಸಾರ್ಟ್​ ತೆರವು ಕಾರ್ಯಾಚರಣೆ
author img

By

Published : Feb 3, 2021, 10:33 PM IST

ಗಂಗಾವತಿ: ಅನುಮತಿ ಪಡೆದುಕೊಂಡಿದ್ದರ ಮೂಲ ಆಶಯಕ್ಕೆ ಧಕ್ಕೆಯಾಗುವಂತೆ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವ ತಾಲೂಕಿನ 25ಕ್ಕೂ ಹೆಚ್ಚು ರೆಸಾರ್ಟ್​ಗಳನ್ನು ನೆಲಸಮ ಮಾಡಲು ಹಂಪಿ ಅಭಿವೃದ್ಧಿ ಪ್ರಾಧಿಕಾರ ಮುಹೂರ್ತ ಫಿಕ್ಸ್ ಮಾಡಿದೆ.

resort-clearance-operation-once-again-by-hampi-authority
ಸಹಾಯಕ ಆಯುಕ್ತ ಸಿದ್ಧರಾಮೇಶ್ವರ

ಇದೇ ತಿಂಗಳ 25ರಂದು ಆನೆಗೊಂದಿ, ಸಣಾಪುರ, ಚಿಕ್ಕರಾಂಪುರ, ವಿರುಪಾಪುರ ಗಡ್ಡೆ, ಹನುಮನಹಳ್ಳಿ, ರಂಗಾಪುರ ಜಂಗ್ಲಿ ಗ್ರಾಮದಲ್ಲಿನ 25ಕ್ಕೂ ಹೆಚ್ಚು ಹೋಂ ಸ್ಟೇ ಹಾಗೂ ಫಾರ್ಮ್​ ಹೌಸ್ ನೆಲಸಮ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.

ಹೋಂ ಸ್ಟೇ ಹಾಗೂ ಫಾರ್ಮ್​ ಹೌಸ್ ಎಂದು ಅನುಮತಿ ಪಡೆದು ಅಭಿವೃದ್ಧಿ ಪ್ರಾಧಿಕಾರದ ನಿಯಮ ಉಲ್ಲಂಘಿಸಿದ್ದಲ್ಲದೆ ವಾಣಿಜ್ಯ ಬಳಕೆಗೆ ಉಪಯೋಗಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಸಂಬಂಧಿತ ಮಾಲೀಕರಿಗೆ ಪ್ರಾಧಿಕಾರ ನೋಟಿಸ್​ ಜಾರಿ ಮಾಡಿದೆ.

ಓದಿ: ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಿ ಶಿಕ್ಷಕರನ್ನು ಬೀಳ್ಕೊಟ್ಟ ಬುಡಕಟ್ಟು ಜನಾಂಗ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಧಿಕಾರದ ಆಯುಕ್ತ ಹಾಗೂ ಸಹಾಯಕ ಆಯುಕ್ತ ಸಿದ್ಧರಾಮೇಶ್ವರ, ಅನಧಿಕೃತ ರೆಸಾರ್ಟ್​ಗಳು ತಲೆ ಎತ್ತಿದ್ದು, ನೆಲಸಮಕ್ಕೆ ಈಗಾಗಲೇ ಸಂಬಂಧಿತರಿಗೆ ನೋಟಿಸ್​ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.