ಗಂಗಾವತಿ: ನಗರದಲ್ಲಿ ಆರಂಭವಾಗಿರುವ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಸ್ಥಾನಕ್ಕೆ ರೇಣಕಾ ಗಂಗಾಧರ ಕುಲಕರ್ಣಿ ನೂತನವಾಗಿ ನೇಮಕವಾಗಿದ್ದಾರೆ. ಇದಕ್ಕೂ ಮೊದಲು ಇವರು ಬಿಜಾಪುರದ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕೊಪ್ಪಳ ಜಿಲ್ಲೆಯ ಹೆಚ್ಚುವರಿ ನ್ಯಾಯಾಲಯದ ಮೊದಲ ಹಾಗೂ ಮಹಿಳಾ ನ್ಯಾಯಾಧೀಶೆ ಎಂಬ ಹಿರಿಮೆಗೆ ರೇಣುಕಾ ಪಾತ್ರರಾಗಿದ್ದಾರೆ. ಹೈಕೋರ್ಟ್ ಆದೇಶ ಅನ್ವಯ ರೇಣುಕಾ ಅವರನ್ನು ರಿಜಿಸ್ಟಾರ್ ಜನರಲ್ ರಾಜೇಂದ್ರ ಬಾದಾಮಿಕರ್ ವರ್ಗಾವಣೆ ಮಾಡಿದ್ದಾರೆ. ಜಿಲ್ಲೆಗೆ ಹೆಚ್ಚುವರಿ ನ್ಯಾಯಾಲಯ ಮಂಜೂರು ಮಾಡುವಂತೆ ಇಲ್ಲಿನ ವಕೀಲರು ಬಹು ದಿನಗಳ ಬೇಡಿಕೆ ಇಟ್ಟಿದ್ದರು. ಇದೀಗ ಗಂಗಾವತಿಯಲ್ಲಿ ಹೆಚ್ಚುವರಿ ನ್ಯಾಯಾಲಯ ಆರಂಭವಾಗಿದ್ದಕ್ಕೆ ವಕೀಲರು ಹಾಗೂ ಕಕ್ಷಿದಾರರಿಗೆ ಅನುಕೂಲವಾಗಿದೆ ಎಂದು ಹಿರಿಯ ವಕೀಲ ಅಶೋಕಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.