ಕುಷ್ಟಗಿ(ಕೊಪ್ಪಳ): ನಾಡೋಜ ಹಿರಿಯ ಸಾಹಿತಿ ಡಾ. ಗೀತಾ ನಾಗಭೂಷಣ ನಿಧನದ ಹಿನ್ನೆಲೆ ಕುಷ್ಟಗಿ ಪಟ್ಟಣದ ಸಾರ್ವಜನಿಕರ ಗ್ರಂಥಾಲಯದಲ್ಲಿ ನಿನ್ನೆ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ಧಾಂಜಲಿಯ ನುಡಿ ನಮನ ಸಲ್ಲಿಸಲಾಯಿತು.
ಈ ವೇಳೆ ಸಾಹಿತಿ ಪ್ರಮೋದ ತುರ್ವಿಹಾಳ ಅವರು ಸಂತಾಪ ನುಡಿ ನಮನ ಸಲ್ಲಿಸಿ ಮಾತನಾಡಿ, ಗೀತಾ ನಾಗಭೂಷಣ ಅವರು ಗ್ರಾಮೀಣ ಭಾಗದ ತೊಳಲಾಟ, ಶೋಷಿತ ಮಹಿಳೆಯರ ಗಟ್ಟಿಧ್ವನಿಯಾಗಿದ್ದರು. ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಂಡು ಸಾಹಿತ್ಯ ಸೇವೆ ಸಲ್ಲಿಸಿದ ಅವರು, ಸಾಹಿತ್ಯ ಲೋಕದ ಮಾತೃಸ್ವರೂಪಿಯಾಗಿದ್ದರು. ಅವರಿಲ್ಲದೆ ಸಾಹಿತ್ಯ ಲೋಕ ಬಡವಾಗಿದೆ ಎಂದರು.