ಕುಷ್ಟಗಿ (ಕೊಪ್ಪಳ): ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸ್ ಹಾಗೂ ಅಹಾರ ಇಲಾಖೆ ಅಧಿಕಾರಿಗಳು ತಡೆದು ಲಾರಿಯನ್ನು ವಶಪಡಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಫೆ.26ರಂದು ತಡರಾತ್ರಿ ಮಿನಿ ಲಾರಿಯಲ್ಲಿ (ಕೆ.ಎ-53 ಇ-0442) ಅಕ್ರಮವಾಗಿ ಅನ್ನ ಭಾಗ್ಯ ಅಕ್ಕಿ ಸಾಗಿಸಲಾಗುತ್ತಿತ್ತು. ಈ ವೇಳೆ ಸಾರ್ವಜನಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಲಾರಿಯನ್ನು ತಡೆದು ವಿಚಾರಣೆ ನಡೆಸಲು ಮುಂದಾಗುತ್ತಿದ್ದಂತೆ ಲಾರಿ ಚಾಲಕ ಗಾಡಿ ಬಿಟ್ಟು ಪರಾರಿಯಾಗಿದ್ದಾನೆ.
ಲಾರಿಯಲ್ಲಿ 50 ಕೆ.ಜಿ.ಯ 199 ಪ್ಲಾಸ್ಟಿಕ್ ಚೀಲದಲ್ಲಿ 95 ಕ್ವಿಂಟಲ್ ಅಕ್ಕಿ ಇದ್ದು, ಅದರ ಮೌಲ್ಯ 2,18,500 ರೂ. ಅಂದಾಜಿಸಲಾಗಿದೆ. ಮಿನಿ ಲಾರಿ ಸಮೇತ ಅಕ್ಕಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆಹಾರ ಇಲಾಖೆ ನಿರೀಕ್ಷಕ ನಿತಿನ್ ಅಗ್ನಿ ದೂರಿನ ಮೇರೆಗೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.