ಕೊಪ್ಪಳ: ಕಳೆದ 34 ದಿನಗಳಿಂದ ಕುಷ್ಟಗಿಯಲ್ಲಿ ಕ್ವಾರಂಟೈನ್ ಆಗಿದ್ದ ರಾಜಸ್ಥಾನ ಮೂಲದ 24 ವಲಸೆ ಕಾರ್ಮಿಕರು ಭಾನುವಾರ ತಮ್ಮ ತವರೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ, ಕಳೆದ ಮಾರ್ಚ್ 31ರಂದು ಇಲ್ಲಿನ ಕುಷ್ಟಗಿಯ ಕ್ಯಾದಿಗುಪ್ಪ ಕ್ರಾಸ್ನಲ್ಲಿ ಸಿಲುಕಿದ್ದ 108 ಜನರನ್ನ ಪರಿಶಿಷ್ಟ ಜಾತಿ ವಸತಿ ನಿಲಯದಲ್ಲಿ ಕ್ವಾರಂಟೈನ್ಲ್ಲಿಟ್ಟು ಊಟ, ಆರೋಗ್ಯ, ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಅವರನ್ನ ಊರಿಗೆ ಮರಳಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕುಷ್ಟಗಿ ಘಟಕದ ಬಸ್ ವ್ಯವಸ್ಥೆ ಕಲ್ಪಿಸಿದ್ದು, ರಾಜಸ್ಥಾನದ 24 ಜನರ ಮೊದಲ ತಂಡ ನಿನ್ನೆ ತಮ್ಮ ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ. ಬಸ್ ಹೊರಡುವ ಮುನ್ನ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ತಹಶೀಲ್ದಾರ್ ಎಂ.ಸಿದ್ದೇಶ್ ಮೊದಲ ತಂಡವನ್ನ ಬೀಳ್ಕೊಟ್ಟರು.
ಶಾಸಕ ಅಮರೇಗೌಡ ಅವರು, ರಾಜಸ್ಥಾನದ ಜನರನ್ನ ಅವರ ರಾಜ್ಯಕ್ಕೆ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿಯನ್ನ ನಮ್ಮ ಸಾರಿಗೆ ಇಲಾಖೆ ಸಿಬ್ಬಂದಿಗೆ ವಹಿಸಿದ್ದಾರೆ. ರಾಜಸ್ಥಾನಕ್ಕೆ ತಲುಪಲು 3 ರಿಂದ 4 ದಿನ ಹಿಡಿಯಲಿದೆ. ಇನ್ನುಳಿದ ಮಧ್ಯಪ್ರದೇಶದ 74 ಜನರನ್ನ ಆ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಪ್ರತ್ಯೇಕ ಮೂರು ಬಸ್ಗಳಲ್ಲಿ ಮಂಗಳವಾರ ಕಳುಹಿಸಿಕೊಡಲು ನಿರ್ಧರಿಸಲಾಗಿದೆ.