ETV Bharat / state

ಗಂಗಾವತಿ ಸೇರಿ ಹಲವಡೆ ಬೆಳ್ಳಂಬೆಳಗ್ಗೆ ವರುಣನ ದರ್ಶನ

ಕನಕಗಿರಿ ಸೇರಿದಂತೆ ನೀರಾವರಿ ಭಾಗವಾದ ಕಾರಟಗಿ ಮತ್ತು ಗಂಗಾವತಿಯ ತಾಲೂಕುಗಳಲ್ಲಿ ಬೆಳ್ಳಂಬೆಳಗ್ಗೆ ವರುಣನ ‌ಆಗಮನದಿಂದಾಗಿ ವಾತಾವರಣ ತಂಪಾಗಿದೆ.

author img

By

Published : May 30, 2020, 11:25 AM IST

ವರುಣನ ದರ್ಶನ
ವರುಣನ ದರ್ಶನ

ಗಂಗಾವತಿ: ಕನಕಗಿರಿ ಸೇರಿದಂತೆ ನೀರಾವರಿ ಭಾಗವಾದ ಕಾರಟಗಿ ಮತ್ತು ಗಂಗಾವತಿಯ ತಾಲೂಕುಗಳಲ್ಲಿ ಬೆಳ್ಳಂಬೆಳಗ್ಗೆ ವರುಣನ ‌ಆಗಮನದಿಂದಾಗಿ ವಾತಾವರಣ ತಂಪಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ಕಾದ ಕಾವಲಿಯಂತಾಗಿದ್ದ ಬಯಲುಸೀಮೆಯ ವಾತಾವರಣಕ್ಕೆ ಜನ ಕಂಗೆಟ್ಟು ಹೋಗಿದ್ದರು. ಆದರೆ ಶನಿವಾರ ಬೆಳಗ್ಗೆ ಸುರಿದ ಮಳೆ ಭೂಮಿಗೆ ತಂಪೆರೆದಿದೆ.

ಬೆಳ್ಳಂಬೆಳಗ್ಗೆ ವರುಣನ ದರ್ಶನ

ಕನಕಗಿರಿಯ ಮಳೆಯಾಸರೆ ಪ್ರದೇಶಗಳಲ್ಲಿ ವರುಣನ ಆಗಮನ ಬೀಜ ಬಿತ್ತನೆಗೆ ಪೂರಕವಾಗಿದೆ. ಸಿದ್ದಾಪುರ, ಮರಳಿ, ಆನೆಗೊಂದಿ, ವೆಂಕಟಗಿರಿ, ಕನಕಗಿರಿ, ಕಾರಟಗಿ, ಹುಲಿ ಹೈದರ ಹೋಬಳಿಯ ನಾನಾ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.