ETV Bharat / state

ಕೊರೊನಾ ಸೋಂಕಿತನ ಜೊತೆ ಬಸ್​​ನಲ್ಲಿ ಬಂದ ವ್ಯಕ್ತಿ ತಾವರಗೇರಾದಲ್ಲಿ ಸಂಚಾರ

ಕಂಪ್ಲಿಗೆ ಕೊರೊನಾ ಸೋಂಕಿತನೊಬ್ಬ ಬೆಂಗಳೂರಿನಿಂದ ಬಸ್​ನಲ್ಲಿ ಬಂದಿದ್ದು, ಆದೇ ಬಸ್​ನಲ್ಲಿ ಸಿಂಧನೂರು ಪಟ್ಟಣದ ವ್ಯಕ್ತಿಯೊಬ್ಬ ಬಂದಿದ್ದಾನೆ. ಆತ ತಾವರಗೇರಾದಲ್ಲಿ ಇರುವ ಸಹೋದರಿಯ ಮನೆಗೆ ಬಂದು, ಆ ದಿನ ಅಲ್ಲಿಯೇ ಇದ್ದು, ಮರುದಿನ ಸಿಂಧನೂರಿಗೆ ಹೋಗಿದ್ದಾನೆ.

quarantine
quarantine
author img

By

Published : May 14, 2020, 7:59 AM IST

ಕುಷ್ಟಗಿ (ಕೊಪ್ಪಳ): ವಾರದ ಹಿಂದೆ ಗಂಗಾವತಿ ಸಮೀಪದ ಕಂಪ್ಲಿಗೆ ಕೊರೊನಾ ಸೋಂಕಿತನೊಬ್ಬ ಬೆಂಗಳೂರಿನಿಂದ ಬಸ್​ನಲ್ಲಿ ಬಂದಿದ್ದು, ಆದೇ ಬಸ್​ನಲ್ಲಿ ಇದ್ದ 27 ಜನರ ಪೈಕಿ ಸಿಂಧನೂರು ಪಟ್ಟಣದ ವ್ಯಕ್ತಿಯೊಬ್ಬ ಇದ್ದದ್ದು ಗೊತ್ತಾಗಿದೆ.

ತಾವರಗೇರಾದಲ್ಲಿ ಇರುವ ಆತನ ಸಹೋದರಿಯ ಮನೆಗೆ ಬಂದು, ಆ ದಿನ ಅಲ್ಲಿಯೇ ಇದ್ದು, ಮರುದಿನ ಸಿಂಧನೂರಿಗೆ ಹೋಗಿದ್ದಾನೆ.

quarantine
ಮನೆಗೆ ಭೇಟಿ ನೀಡಿದ ಅಧಿಕಾರಿಗಳು

ನಿನ್ನೆ ಸಂಜೆ ಸಿಂಧನೂರಿನ ವ್ಯಕ್ತಿ ಬಂದು ಹೋದ ಮನೆಗೆ ಪೊಲೀಸರು, ಆರೋಗ್ಯ ಇಲಾಖೆಯವರು ಬಂದು, ಮನೆಯಲ್ಲಿರುವ 9 ಜನರನ್ನು ಕ್ವಾರಂಟೈನ್ ಮಾಡಿದ್ದು, ಮನೆ ಬಿಟ್ಟು ಹೊರಗಡೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

ಬಸವಣ್ಣ ಕ್ಯಾಂಪ್​ನಲ್ಲಿರುವ ಈ ಮನೆಯ ಹತ್ತಿರ ಯಾರೂ ಹೋಗಬಾರದು ಎಂದು ಅಕ್ಕ-ಪಕ್ಕದ ಮನೆಯವರಿಗೆಲ್ಲಾ ಪೊಲೀಸರು ಸೂಚನೆ ನೀಡಿದ್ದಾರೆ.

ಕ್ವಾರಂಟೈನ್​ಗೆ ಒಳಗಾದ ಮನೆಯಲ್ಲಿರುವ ಈ ಕುಂಟುಂಬದ ಸದಸ್ಯರಿಗೆ ಊಟ, ನೀರು ಸರಬರಾಜು ಮಾಡವಂತೆ ಪಂಚಾಯತ್​ಗೆ ತಾಲೂಕಾ ಆಡಳಿತ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.