ETV Bharat / state

ಕುಷ್ಟಗಿ: ಕಹಿಯಾದ ಶುದ್ಧ ಕುಡಿಯುವ ನೀರಿನ ಘಟಕದ ನೀರು - Kushtagi District

ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದ ನೀರು ಕಹಿಯಾಗಿದ್ದು, ಗ್ರಾಮಸ್ಥರು ಈ ನೀರನ್ನು ಕುಡಿಯಲು ಹಿಂಜರಿಯುತ್ತಿದ್ದಾರೆ.

Kushtagi
ಶುದ್ಧ ಕುಡಿಯುವ ನೀರಿನ ಘಟಕ
author img

By

Published : Jun 14, 2020, 10:29 AM IST

ಕುಷ್ಟಗಿ (ಕೊಪ್ಪಳ): ತಾಲೂಕಿನ ಕಡೇಕೊಪ್ಪ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದ ನೀರು ಕಹಿಯಾಗಿದ್ದು, ಇಲ್ಲಿನ ಜನ ಈ ನೀರನ್ನು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ.

ಗ್ರಾಮದಲ್ಲಿ ನಿತ್ಯವೂ ಈ ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನೇ ಬಳಸಲಾಗುತ್ತಿತ್ತು. ಆದರೀಗ ಕ್ರಮೇಣ ಈ ನೀರು ಕಹಿಯಾಗಿದೆ. ಅಲ್ಲದೇ ಈ ನೀರನ್ನು ಕುಡಿದರೆ ಗಂಟಲು ನೋವು ಬರುತ್ತಿರುವುದು ತಿಳಿದಿದ್ದು, ಹೀಗಾಗಿ ಈ ಗ್ರಾಮದ ಜನರು ಈ ನೀರಿನ ಬದಲಿಗೆ ಗ್ರಾಮ ಪಂಚಾಯಿತಿ ಪೂರೈಸಿದ ನೀರನ್ನೇ ಬಳಸುತ್ತಿದ್ದಾರೆ. ಶುದ್ಧ ನೀರಿನ ಘಟಕದಲ್ಲಿ ಈ ಪರಿಸ್ಥಿತಿಯಿಂದಾಗಿ ಪರ್ಯಾಯವಾಗಿ ಶುದ್ಧ ನೀರನ್ನು ದೋಟಿಹಾಳದಿಂದ ತಂದು ಕುಡಿಯುವ ನೀರಿನ ದಾಹ ನೀಗಿಸುತ್ತಿದ್ದಾರೆ.

ಕಹಿಯಾದ ಶುದ್ಧ ಕುಡಿಯುವ ನೀರಿನ ಘಟಕದ ನೀರು

ಈ ವಿಷಯಕ್ಕೆ ಸಂಬಂಧಿಸಿದ ನೀರಿನ ಘಟಕದ ನಿರ್ವಹಣೆಯ ಸಿಬ್ಬಂದಿ ಮೇಲಧಿಕಾರಿಗೆ ಮಾಹಿತಿ ತಿಳಿಸಿದ್ದು, ಇದರನ್ವಯ ಇದಕ್ಕೆ ಸಂಬಂಧಿಸಿದ ಸಿಬ್ಬಂದಿ ಸ್ಥಾನಿಕ ಪರಿಶೀಲನೆ ನಡೆಸಿದ್ದಾರೆ.

ಗ್ರಾಮೀಣ ಮತ್ತು ನೈರ್ಮಲ್ಯ ಇಲಾಖೆ ನೀರಿನಲ್ಲಿನ ಕಹಿ ಅಂಶವನ್ನು ತಕ್ಷಣ ಪತ್ತೆ ಹಚ್ಚಿ ಗ್ರಾಮಸ್ಥರ ಆತಂಕ ನಿವಾರಣೆ ಮಾಡಬೇಕೆಂದು ಗ್ರಾಮದ ಸಂತೋಷ ಪಾಟೀಲ ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.