ETV Bharat / state

ಅಕ್ರಮ ಮರಳು ಗಣಿಗಾರಿಕೆ ತಡೆಯುವಂತೆ ಡಿ. ಹೆಚ್. ಪೂಜಾರ ಆಗ್ರಹ - ಅಕ್ರಮ ಮರಳು ಗಣಿಗಾರಿಕೆ

ಕೊಪ್ಪಳ ತಾಲೂಕಿನ ನರೇಗಲ್ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯುವಂತೆ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ. ಹೆಚ್. ಪೂಜಾರ ಆಗ್ರಹಿಸಿದರು.

Pujaara demand to stop illegal sand mining
ಅಕ್ರಮ ಮರಳು ಗಣಿಗಾರಿಕೆ ತಡೆಯುವಂತೆ ಡಿ. ಹೆಚ್. ಪೂಜಾರ ಆಗ್ರಹ
author img

By

Published : Jan 22, 2020, 3:35 PM IST

ಕೊಪ್ಪಳ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯುವಂತೆ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ. ಹೆಚ್. ಪೂಜಾರ ಆಗ್ರಹಿಸಿದರು.

ಅಕ್ರಮ ಮರಳು ಗಣಿಗಾರಿಕೆ ತಡೆಯುವಂತೆ ಡಿ. ಹೆಚ್. ಪೂಜಾರ ಆಗ್ರಹ

ನಗರದ ಮೀಡಿಯಾ ಕ್ಲಬ್​ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪರವಾನಿಗೆ ಪಡೆದು ಗಣಿಗಾರಿಕೆ‌ ನಡೆಸಿದರೆ ನಮ್ಮದೇನೂ ತಕರಾರು ಇಲ್ಲ. ಆದರೆ, ಅಕ್ರಮವಾಗಿ ಮರಳು ಗಣಿಗಾರಿಕೆ‌ ನಡೆಯುತ್ತಿದೆ. ಈ ಬಗ್ಗೆ ಶಾಸಕರು ಯಾಕೆ ಮಾತನಾಡುತ್ತಿಲ್ಲ ಎಂದರು.

ಅಕ್ರಮ ಮರಳು ಗಣಿಗಾರಿಕೆಯಿಂದ ತಾಲೂಕಿನ ನರೇಗಲ್ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಅಕ್ರಮ ಮರಳು ಗಣಿಗಾರಿಕೆಯಿಂದ ಅನೇಕ ಜೀವಗಳು ಸಹ ಬಲಿಯಾದ ಉದಾಹರಣೆಗಳು ಇವೆ. ಇಲ್ಲಿಂದ ಮರಳನ್ನು ಬೇರೆ ಬೇರೆ ಕಡೆಗೆ ಸಾಗಿಸುತ್ತಿರುವುದರಿಂದ ಸ್ಥಳೀಯ ಸಾಮಾನ್ಯ ಜನರಿಗೆ ಮನೆಕಟ್ಟಲು ಮರಳು ಸಿಗುತ್ತಿಲ್ಲ. ಗವಿಮಠದ ಶ್ರೀಗಳು ಮತ್ತು ತಾಲೂಕಿನ ಅನೇಕರು ತಿಂಗಳಾನುಗಟ್ಟಲೆ ಶ್ರಮಿಸಿ ಹಿರೇಹಳ್ಳವನ್ನು ಸ್ವಚ್ಛಗೊಳಿಸಿದರು. ಆದರೆ, ಅಕ್ರಮ ಮರಳುಗಣಿಗಾರಿಕೆಯಿಂದ ಅವರ ಶ್ರಮವೆಲ್ಲ ಮಣ್ಣುಪಾಲಾಗಿದೆ ಎಮದರು.

ತಾಲೂಕಿನ ನರೇಗಲ್ ಗ್ರಾಮದಿಂದ ಕೇವಲ 300 ಮೀಟರ್ ಅಂತರದಲ್ಲಿ ಹತ್ತಾರು ಅಡಿಗಳಲ್ಲಿ ಗುಂಡಿ ತೆಗೆದು ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ. ಇದು ಮುಂದೆ ಗ್ರಾಮದ ಜನರಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಡಿ. ಹೆಚ್. ಪೂಜಾರ ಆಗ್ರಹಿಸಿದರು.

Intro:Body:ಕೊಪ್ಪಳ:- ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯುವಂತೆ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ ಆಗ್ರಹಿಸಿದರು. ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರವಾನಿಗೆ ಪಡೆದು ಗಣಿಗಾರಿಕೆ‌ ನಡೆಸಿದರೆ ನಮ್ಮದೇನೂ ತಕರಾರು ಇಲ್ಲ. ಆದರೆ ಅಕ್ರಮವಾಗಿ ಮರಳು ಗಣಿಗಾರಿಕೆ‌ ನಡೆಯುತ್ತಿದೆ. ಈ ಬಗ್ಗೆ ಶಾಸಕರು ಯಾಕೆ ಮಾತನಾಡುತ್ತಿಲ್ಲ ಎಂದರು. ಅಕ್ರಮ ಮರಳು ಗಣಿಗಾರಿಕೆಯಿಂದ ತಾಲೂಕಿನ ನರೇಗಲ್ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಅಕ್ರಮ ಮರಳು ಗಣಿಗಾರಿಕೆಗೆ ಅನೇಕ ಜೀವಗಳು ಸಹ ಬಲಿಯಾದ ಉದಾಹರಣೆಗಳು ಇವೆ. ಇಲ್ಲಿಂದ ಮರಳನ್ನು ಬೇರೆ ಬೇರೆ ಸಾಗಿಸುತ್ತಿರುವುದರಿಂದ ಸ್ಥಳೀಯ ಸಾಮಾನ್ಯ ಜನರಿಗೆ ಮನೆಕಟ್ಟಲು ಮರಳು ಸಿಗ್ತಿಲ್ಲ. ಗವಿಮಠದ ಶ್ರೀಗಳು ಮತ್ತು ತಾಲೂಕಿನ ಅನೇಕರು ತಿಂಗಳುಗಟ್ಟಲೆ ಶ್ರಮಿಸಿ ಹಿರೇಹಳ್ಳವನ್ನು ಸ್ವಚ್ಛಗೊಳಿಸಿದರು. ಶ್ರಮಿಸಿದರು. ಆದರೆ ಅಕ್ರಮ ಮರಳುಗಣಿಗಾರಿಕೆ ನಡೆದಿದೆ. ತಾಲೂಕಿನ ನರೇಗಲ್ ಗ್ರಾಮದಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆದಿದೆ. ಗ್ರಾಮದಿಂದ ಕೇವಲ 300 ಮೀಟರ್ ಅಂತರದಲ್ಲಿ ಹತ್ತಾರು ಅಡಿಗಳಲ್ಲಿ ಗುಂಡಿ ತೆಗೆದು ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ. ಇದು ಮುಂದೆ ಗ್ರಾಮದ ಜನರಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಡಿ.ಎಚ್. ಪೂಜಾರ ಆಗ್ರಹಿಸಿದರು. ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೇಗಲ್, ಮುದುಕಪ್ಪ ಹೊಸಮನಿ, ಗಾಳೆಪ್ಪ ಮೀಸಿ, ಗೋಪಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.