ಗಂಗಾವತಿ: ಸಾರ್ವಜನಿಕ ಉಪಯೋಗಕ್ಕೆ ಎಂದು ಮೀಸಲಾಗಿದ್ದ ಉದ್ಯಾನದ ಜಾಗವನ್ನು ರಾಜಕೀಯ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವು ಮಾಡುವಂತೆ ವಾರ್ಡ್ ಸದಸ್ಯೆಯೊಬ್ಬರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ಇಲ್ಲಿನ ವಿವೇಕಾನಂದ ಕಾಲೋನಿಗೆ ಪ್ರವೇಶಿಸುವ ಸಂದರ್ಭದಲ್ಲಿ ಬಲ ಭಾಗದಲ್ಲಿರುವ ಸಾರ್ವಜನಿಕ ಉದ್ಯಾನಕ್ಕೆ ಮೀಸಲಾದ ಜಾಗವನ್ನು ಒತ್ತುವರಿ ಮಾಡಿ ನಕಲಿ ದಾಖಲೆ ಸೃಷ್ಟಿಸಲಾಗುತ್ತಿದೆ ಎಂದು ವಾರ್ಡ್ ಸದಸ್ಯೆ ಸುಚೇತಾ ಸಿರಿಗೇರಿ ಆರೋಪಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಅವರಿಗೆ ಮನವಿ ಸಲ್ಲಿಸಿದ್ದು, ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಕೋಟ್ಯಂತರ ಬೆಲೆ ಬಾಳುವ ಜಾಗ ಒತ್ತುವರಿಯಾಗುತ್ತದೆ. ಇದಕ್ಕೆ ನಗರಸಭೆ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯದಿಂದಲೇ ಸಾರ್ವಜನಿಕ ಸ್ಥಳ ಒತ್ತುವರಿಯಾಗಲಿದೆ ಎಂದು ಸುಚೇತಾ ವಿವರಣೆ ನೀಡಿದರು.