ETV Bharat / state

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಮಗ್ರ ಕೋವಿಡ್ ಪರಿಹಾರ ನೀಡಿ - ಕೊಪ್ಪಳ

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಮಗ್ರ ಕೋವಿಡ್ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.

Protest
ಪ್ರತಿಭಟನೆ
author img

By

Published : Jul 30, 2020, 5:19 PM IST

ಕೊಪ್ಪಳ: ಕೊರೊನಾದಿಂದ‌ ಸಂಕಷ್ಟದಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಮಗ್ರ ಕೋವಿಡ್ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಮಗ್ರ ಕೋವಿಡ್ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು‌. ಸರ್ಕಾರ ಈಗಾಗಲೇ ಘೋಷಿಸಿರುವಂತೆ 5 ಸಾವಿರ ರೂಪಾಯಿ ಕೋವಿಡ್ ಪರಿಹಾರ ವಿತರಣೆಯ ಅವಧಿ ವಿಸ್ತರಿಸಬೇಕು. ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಎಲ್ಲಾ ಕಟ್ಟಡ ಕಾರ್ಮಿಕರಿಗೆ ವಾರಕ್ಕೆ ಎರಡು ಸಾವಿರ ರೂಪಾಯಿಯಂತೆ ಕನಿಷ್ಠ ಮೂರು ತಿಂಗಳವರೆಗೆ ಕೋವಿಡ್ ಪರಿಹಾರ ಘೋಷಿಸಬೇಕು ಎಂದರು.

ಸೇವಾಸಿಂಧು ಕೇಂದ್ರಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಖಾಲಿ ಇರುವ ಕಾರ್ಮಿಕ ವೃತ್ತ ನಿರೀಕ್ಷಕರು ಹಾಗೂ ಇತರೆ ಹುದ್ದೆಗಳನ್ನು ಶೀಘ್ರ ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ಬೆಂಗಳೂರಿನಲ್ಲಿ ನೀಡಿದಂತೆ ರಾಜ್ಯದ ಎಲ್ಲಾ ಕಟ್ಟಡ ನಿರ್ಮಾಣ‌ ಕಾರ್ಮಿಕರಿಗೆ ರೇಷನ್‌ ಕಿಟ್ ವಿತರಿಸಬೇಕು ಎಂಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಸರ್ಕಾರ ಆದಷ್ಟು ಬೇಗ ಈಡೇರಿಸಬೇಕು. ಇಲ್ಲವಾದಲ್ಲಿ ಆಗಸ್ಟ್​​ 10 ರಂದು ಕಾರ್ಮಿಕ ಇಲಾಖೆ‌ ಕಚೇರಿ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.