ಕೊಪ್ಪಳ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ತಮ್ಮನಿಂದಲೇ ಅಣ್ಣನ ಕೊಲೆ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ನೆಲಜೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನಿನ್ನೆ(ಭಾನುವಾರ) ತಡರಾತ್ರಿ ತಂದೆ ಚೆನ್ನಪ್ಪಗೌಡ ಹಾಗೂ ತಮ್ಮ ವೆಂಕಟೇಶ್ ಎಂಬುವವರು ತಮ್ಮ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಅನಿಲ್ ಕುಮಾರ್ ಎಂಬುವವರು ಆರೋಪಿಸಿದ್ದಾರೆ.
ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಇವರ ಮಧ್ಯೆ ವೈಮನಸು ಉಂಟಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಅನಿಲ್ ಕುಮಾರ್ ಮನೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ನಿರ್ಧರಿಸಿದ್ದಾರೆ. ಆದರೆ ಅದೃಷ್ಟವಶಾತ್ ಅನಿಲ್ ಕುಮಾರ್ ಹಾಗೂ ಅವರ ಕುಟುಂಬ ಅಪಾಯದಿಂದ ಪಾರಾಗಿದೆ ಎನ್ನಲಾಗ್ತಿದೆ.
ಈ ಸಂಬಂಧ ಅನಿಲ್ ಕುಮಾರ ಬೇವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಅನೀಲ ಕುಮಾರ್ ತಂದೆ ಚೆನ್ನಪ್ಪಗೌಡ ಹಾಗೂ ತಮ್ಮ ವೆಂಕಟೇಶ್ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಗಂಡ ಮನೆಯಲ್ಲಿ ಇಲ್ಲದಾಗ ಅತ್ತೆ - ಮಾವನ ಕೊಂದು ಬೆಂಕಿಯಿಟ್ಟ ಸೊಸೆ.. ಬಳಿಕ ಪಕ್ಕದ ರೂಂನಲ್ಲಿ ಲಾಕ್!