ಗಂಗಾವತಿ : ಕೊರೊನಾ ಭೀತಿ ಹಿನ್ನೆಲೆ ಇನ್ನುೂ ಶಾಲೆಗಳ ಆರಂಭಕ್ಕೆ ಸರ್ಕಾರ ಮತ್ತು ಶಿಕ್ಷಣ ಇಲಾಖೆಯಿಂದ ಯಾವುದೇ ಅಧಿಕೃತ ಅನುಮತಿ ಸಿಕ್ಕಿಲ್ಲ. ಆದರೆ, ನಗರದ ಕೆಲ ಖಾಸಗಿ ಶಾಲೆಗಳು ಪಾಲಕರಿಂದ ಬಲವಂತವಾಗಿ ಶುಲ್ಕ ವಸೂಲಿಗೆ ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ಹೊರವಲಯ ವಡ್ಡರಹಟ್ಟಿ ಬಳಿ ಇರುವ ಚೈತನ್ಯ ಟೆಕ್ನೋ ಎಂಬ ಶಿಕ್ಷಣ ಸಂಸ್ಥೆ ಈಗಾಗಲೇ ಪಾಲಕರಿಗೆ ನಿತ್ಯ ಕರೆ ಮಾಡಿ ಶಾಲೆಗೆ ಕರೆಯಿಸಿಕೊಂಡು ಮಕ್ಕಳ ಪ್ರಸಕ್ತ ಶೈಕ್ಷಣಿಕ ವರ್ಷದ ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಲಾಗಿದೆ.
ಶಾಲೆ ಆರಂಭವಾದ ಬಳಿಕ ಶುಲ್ಕ ಪಾವತಿಸುವುದಾಗಿ ಕೆಲ ಪಾಲಕರು ಹೇಳಿದ್ರೂ ಕೇಳಿಸಿಕೊಳ್ಳದ ಶಿಕ್ಷಣ ಸಂಸ್ಥೆ, ಮಕ್ಕಳ ಪ್ರವೇಶಾತಿ ರದ್ದು ಮಾಡುವುದಾಗಿ ಬೆದರಿಕೆ ಹಾಕುತ್ತಿದೆ ಎಂದು ಶುಲ್ಕ ಪಾವತಿಸಿರುವ ಪಾಲಕರು ಆರೋಪಿಸಿದ್ದಾರೆ.