ETV Bharat / state

ಸಂಕಷ್ಟಕ್ಕೊಳಗಾಗಿದ್ದ ಪ್ರಿಂಟಿಂಗ್ ಪ್ರೆಸ್​ಗಳಿಗೆ ಮರು ಜೀವ ತುಂಬಿದ ಗ್ರಾ.ಪಂ. ಚುನಾವಣೆ - Kushtagi election news

ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸಿದ್ದ ಪ್ರಿಂಟಿಂಗ್​ ಪ್ರೆಸ್​ ಮಾಲೀಕರು ಇದೀಗ ಗ್ರಾಮ ಪಂಚಾಯಿತಿ​ ಎಲೆಕ್ಷನ್​ನಿಂದ ಸುಧಾರಿಸಿಕೊಂಡಿದ್ದಾರೆ.

ಪ್ರಿಂಟಿಂಗ್ ಪ್ರೆಸ್​ಗಳು ಗ್ರಾ.ಪಂ ಚುನಾವಣೆಯಿಂದ ಚೇತರಿಕೆ

author img

By

Published : Dec 22, 2020, 7:42 AM IST

Updated : Dec 22, 2020, 7:55 AM IST

ಕುಷ್ಟಗಿ (ಕೊಪ್ಪಳ): ಲಾಕ್​ಡೌನ್ ವೇಳೆ ಸಂಕಷ್ಟಕ್ಕೀಡಾಗಿದ್ದ ಆಫ್ಸೆಟ್ ಪ್ರಿಂಟಿಂಗ್ ಪ್ರೆಸ್ ಉದ್ಯಮ ಗ್ರಾಮ ಪಂಚಾಯಿತಿ ಚುನಾವಣೆಯಿಂದ ಚೇತರಿಸಿಕೊಂಡಿದೆ.

ಕಳೆದ ಮಾರ್ಚ್​ ತಿಂಗಳ ಬಳಿಕ ಕೊರೊನಾ ವೈರಸ್​ನಿಂದ ಸ್ಥಗಿತಗೊಂಡಿದ್ದ ಆಫ್ಸೆಟ್ ಪ್ರಿಂಟಿಂಗ್ ಪ್ರೆಸ್ ಉದ್ಯಮಗಳು ಅನ್​ಲಾಕ್​ನಿಂದ ಕೊಂಚ ಸುಧಾರಣೆ ಕಂಡಿದ್ದು, ಇದೀಗ ಗ್ರಾಮ ಪಂಚಾಯಿತಿ​ ಎಲೆಕ್ಷನ್​ನಿಂದ ಮತ್ತೆ ಹುಮ್ಮಸ್ಸು ಪಡೆದುಕೊಂಡಿವೆ.

ಕೋವಿಡ್ ಮಾರ್ಗಸೂಚಿ ನಿಬಂಧನೆಗಳ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳು, ಇತರೆ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಆದರೆ ಅನ್​ಲಾಕ್​ ಬಳಿಕ ಆಮಂತ್ರಣ ಪತ್ರಗಳನ್ನು ತಯಾರಿ ಮಾಡುವುದರಿಂದ ತಕ್ಕಮಟ್ಟಿನ ಕೆಲಸ ಪ್ರಾರಂಭವಾಗಿದೆ. ಇದೀಗ ಗ್ರಾಮ ಪಂಚಾಯಿತಿ ಚುನಾವಣೆ ಬಳಿಕ ಪ್ರಿಂಟಿಂಗ್​ ಕೆಲಸ ಬಿಡುವಿಲ್ಲದ ನಡೆಯುತ್ತಿದೆ.

ಗ್ರಾ.ಪಂ. ಚುನಾವಣೆಯಿಂದ ಚೇತರಿಸಿಕೊಂಡ ಪ್ರಿಂಟಿಂಗ್ ಪ್ರೆಸ್​ ಉದ್ಯಮ

ಯಲಬುರ್ಗಾ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳ ಚುನಾವಣಾ ಉಮೇದುವಾರರು ಕುಷ್ಟಗಿ ಪ್ರಿಂಟಿಂಗ್ ಪ್ರೆಸ್​ಗಳಲ್ಲಿ ಮಾದರಿ ಮತ ಪತ್ರ ಮುದ್ರಿಸಿಕೊಳ್ಳಲು‌ ಮುಂದಾಗಿದ್ದಾರೆ. ಇಲ್ಲಿನ ಪ್ರಿಂಟಿಂಗ್ ಪ್ರೆಸ್​ಗಳ ಕೆಲಸಗಾರರು ಹಗಲು ರಾತ್ರಿ ಎನ್ನದೇ ಕೆಲಸದಲ್ಲಿ ನಿರತರಾಗಿದ್ದರು.

ಇಲ್ಲಿನ ಚಿರಂಜೀವಿ ಪ್ರಿಂಟಿಂಗ್ ಪ್ರೆಸ್ ಮಾಲೀಕ ನಾಗರಾಜ್ ಹಿರೇಮಠ ಈ ಬಗ್ಗೆ ಮಾತನಾಡಿ, "ಗ್ರಾಮ ಪಂಚಾಯಿತಿ​ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚು ಕೆಲಸ ಸಿಗುತ್ತಿದೆ. ಗ್ರಾ. ಪಂ. ಚುನಾವಣೆ ಜೊತೆಯಲ್ಲಿ ಮದುವೆ ಕಾರ್ಯಕ್ರಮಗಳು ಶುರುವಾಗಿದ್ದು, ಬಿಡುವಿಲ್ಲದ ಕೆಲಸ ಸಿಕ್ಕಿದೆ" ಎನ್ನುತ್ತಾರೆ.

ಕುಷ್ಟಗಿಯಲ್ಲಿ ಡಿ.27ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.

Last Updated : Dec 22, 2020, 7:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.