ETV Bharat / state

ಕೊಯ್ಲಿ ಹೆಂಡ್ತಿ ಪ್ರಗ್ನೆಂಟ್ ಆದ್ರೆ ಮೋದಿ ಟ್ವೀಟ್ ಮಾಡ್ತಾರೆ.. ಅದೇ ರೈತರ ಬಗ್ಗೆ ಕಾಳಜಿ ಯಾಕಿಲ್ಲ : ತಂಗಡಗಿ

ಕಳೆದ 90 ದಿನಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರನ್ನು ಭಯೋತ್ಪಾದಕ, ನಕ್ಸಲ್, ಪಾಕಿಸ್ತಾನಿ, ಖಲಿಸ್ತಾನಿಗಳು ಎಂದು ದೂರುತ್ತೀರಿ. 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದಿರಿ. ಆದರೆ, 10ಕೋಟಿ ಯುವಕರು ಕೆಲಸ ಕಳೆದುಕೊಂಡಿದ್ದಾರೆ..

prime-minister-modi-don-not-have-concern-about-farmers
ಶಿವರಾಜ ತಂಗಡಗಿ
author img

By

Published : Feb 13, 2021, 7:25 PM IST

ಗಂಗಾವತಿ : ವಿರಾಟ್ ಕೊಯ್ಲಿ ಹೆಂಡತಿ ಪ್ರಗ್ನಂಟ್ ಆದ್ರೆ ಟ್ವೀಟ್ ಮಾಡುವ ಪ್ರಧಾನಿ ಮೋದಿ, ನೂರಾರು ರೈತರು ಸತ್ತರೆ ಸಾಂತ್ವನ ಹೇಳುವಷ್ಟು ನೈತಿಕತೆ ಹೊಂದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಕಿಡಿಕಾರಿದರು.

ನಗರದ ಕೃಷ್ಣದೇವರಾಯ ವೃತ್ತದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ಗಂಗಾವತಿ ಬ್ಲಾಕ್ ಕಾಂಗ್ರೆಸ್​​​ನಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಲೆ ಏರಿಕೆ ಮಾತ್ರ ಈ ದೇಶದ ಜನರಿಗೆ ಸಿಕ್ಕ ಅಚ್ಛೇ ದಿನ್.

ಕೇಂದ್ರ ಸರ್ಕಾರದ ಜನ ವಿರೋಧಿ ಮಸೂದೆಗಳ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಇದನ್ನು ಮರೆಮಾಚಲು ಬಿಜೆಪಿಗರು ರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹಿಸುವ ಕೆಲಸಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಗುಡುಗಿದ ಶಿವರಾಜ ತಂಗಡಗಿ..

ನಿಧಿ ಸಂಗ್ರಹಿಸುವುದು ಸರ್ಕಾರದ ಕೆಲಸವಲ್ಲ. ನಾವು ರಾಮನ ಭಕ್ತರು, ಹನುಮನ ಆರಾಧಕರು. ರಾಮ, ಹನುಮ ನಿಮಗಷ್ಟೇ ದೇವರೇ? ಎಂದು ಪ್ರಶ್ನಿಸಿದ ತಂಗಡಗಿ, ನಿಮಗೆ ನಾಚಿಕೆಯಾಗಬೇಕು.

ಕಳೆದ 90 ದಿನಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರನ್ನು ಭಯೋತ್ಪಾದಕ, ನಕ್ಸಲ್, ಪಾಕಿಸ್ತಾನಿ, ಖಲಿಸ್ತಾನಿಗಳು ಎಂದು ದೂರುತ್ತೀರಿ. 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದಿರಿ. ಆದರೆ, 10ಕೋಟಿ ಯುವಕರು ಕೆಲಸ ಕಳೆದುಕೊಂಡಿದ್ದಾರೆ ಎಂದು ತಂಗಡಗಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.