ETV Bharat / state

ಓವೈಸಿ ನಾಯಿ ಇದ್ದಂತೆ ಯಾವಾಗಲೂ ಬೊಗಳುತ್ತಲೇ ಇರುತ್ತದೆ: ಪ್ರಮೋದ್ ಮುತಾಲಿಕ್

ಟಿಪ್ಪು ಹಿಂದೂ ದೇವಾಲಯಗಳನ್ನು ಒಡೆದು ಹಾಕಿದ್ದಾನೆ. ಹಿಂದೂಗಳನ್ನು ಕೊಚ್ಚಿ ಕೊಂದಿದ್ದಾನೆ, ಮತಾಂತರ ಮಾಡಿದ್ದಾನೆ. ಇಂತಹ ಟಿಪ್ಪುವಿನ ಇತಿಹಾಸ ಶಾಲಾ ಪಠ್ಯದಲ್ಲಿ ಏಕಿರಬೇಕು? ಮತಾಂಧ, ದೇಶದ್ರೋಹಿ ಟಿಪ್ಪುವಿನ ಕುರಿತ ವಿಚಾರಗಳನ್ನು ಪಠ್ಯದಿಂದ ತೆಗೆದುಹಾಕಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್

author img

By

Published : Jul 29, 2020, 3:39 PM IST

ಕೊಪ್ಪಳ: ಓವೈಸಿ ನಾಯಿ ಇದ್ದಂತೆ. ಅದು ಯಾವಾಗ ಬೇಕಾದರೂ ಬೊಗಳುತ್ತಲೇ ಇರುತ್ತದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹರಿಹಾಯ್ದರು.

ನಗರದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಆನೆ. ಓವೈಸಿಯಂತಹ ನಾಯಿ ಬೊಗಳಿಕೆಗೆ ಈ ಆನೆ ಯಾವುದೇ ಸೊಪ್ಪು ಹಾಕುವುದಿಲ್ಲ. ಗದ್ದಲ, ಗಲಾಟೆ ಇಲ್ಲದೆ ಶಾಂತಿಯುತವಾಗಿ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಲ್ಲಿ ಶಂಕು ಸ್ಥಾಪನೆ ಕಾರ್ಯಕ್ರಮ ನಡೆಯುತ್ತದೆ ಎಂದರು.

ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್

ಬಿಜೆಪಿಯಲ್ಲಿ ಸಿಎಂ ಬದಲಾವಣೆ ಕುರಿತಂತೆ ರಾಜಕೀಯ ಬೆಳವಣಿಗೆಗಳು ಆಗುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿದ ಮುತಾಲಿಕ್, ಬೇರೆ ಬೇರೆ ಸಂದರ್ಭದಲ್ಲಿ ಅನಂತ ಕುಮಾರ್ ಹೆಗಡೆ ಮುಖ್ಯಮಂತ್ರಿ ಎಂದು ಬಿಂಬಿಸಲಾಯಿತು. ಉಮೇಶ ಕತ್ತಿ ನಾನೇ ಸಿಎಂ ಎಂದು ಹೇಳಿಕೊಂಡರು. ಆದರೆ ಇಂತಹ ಸಂದರ್ಭದಲ್ಲಿ ಸಿಎಂ ಬದಲಾವಣೆಯ ಮಾತುಗಳು ರಾಜ್ಯ ರಾಜಕಾರಣದಲ್ಲಿ ಅನವಶ್ಯಕ.

ರಾಜ್ಯ ರಾಜಕಾರಣದಲ್ಲಿ ಇಂತಹ ಅನವಶ್ಯಕ ಗೊಂದಲ ಸೃಷ್ಠಿಸಬೇಡಿ. ರಾಜ್ಯದ ಜನರು ಕೊರೊನಾ ಭೀತಿ, ಆತಂಕದಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ರಾಜಕೀಯ ದುಷ್ಟತನ, ನೀಚತನ ಮಾಡಬಾರದು. ಅಕಸ್ಮಾತ್ ಹಾಗೆ ಮಾಡಿದರೆ ಜನ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಚಪ್ಪಲಿ ತೆಗೆದುಕೊಂಡು ಬೆನ್ನು ಹತ್ತುತ್ತಾರೆ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.