ETV Bharat / state

ಮಾಧ್ಯಮಗಳಲ್ಲಿ ಬರಲಿ ಎಂದು ಮುತ್ತಿಗೆ ಹಾಕುತ್ತಾರೆ: ಸಚಿವ ಪ್ರಭು ಚೌಹಾಣ್ - Dalith organisation activists attack on prabhu chouhan

ಸದಾಶಿವ ಆಯೋಗದ ವರದಿ ಜಾರಿ ಒಪ್ಪುವುದಿಲ್ಲ ಎಂದು ಸಚಿವ ಪ್ರಭು ಚೌಹಾಣ್ ನಿನ್ನೆ ಕೊಪ್ಪಳ ತಾಲೂಕಿನ ಬಹದ್ದೂರ್​ ಬಂಡಿ ಬಳಿ ಹೇಳಿಕೆ ನೀಡಿದ್ದರು. ಸಚಿವರ ಹೇಳಿಕೆ ಖಂಡಿಸಿ ಮಾದಿಗ ಮಹಾಸಭಾದ ಕಾರ್ಯಕರ್ತರು ಜಿಲ್ಲಾಡಳಿತದ ಬಳಿ ಇಂದು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ್ದರು.

prabhu-chouhan
ಸಚಿವ ಪ್ರಭು ಚೌಹಾಣ್
author img

By

Published : Sep 1, 2021, 9:24 PM IST

ಕೊಪ್ಪಳ: ಮಾದಿಗ ಮಹಾಸಭಾದ ಕಾರ್ಯಕರ್ತರು ನಗರದಲ್ಲಿ ಸಚಿವ ಪ್ರಭು ಚೌಹಾಣ್​ಗೆ ಮುತ್ತಿಗೆ ಹಾಕಲು ಯತ್ನಿಸಿದ ಕುರಿತು ಸ್ವತಃ ಸಚಿವರೇ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳಲ್ಲಿ ಬರಲಿ ಎಂದು ಅವರು ಈ ರೀತಿ ಮಾಡುತ್ತಾರೆ ಎಂದು ಹೇಳಿದ್ದಾರೆ.

ಸಚಿವ ಪ್ರಭು ಚೌಹಾಣ್

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಸದಾಶಿವ ಆಯೋಗದ ವರದಿ ಜಾರಿಯನ್ನು ಒಪ್ಪುವುದಿಲ್ಲ ಎಂದು ಹೇಳಿರುವುದು ನನ್ನ ವೈಯಕ್ತಿಕ ಹೇಳಿಕೆ. ಇಂದು ನನಗೆ ಮುತ್ತಿಗೆ ಹಾಕಲು ಬಂದವರು ನಮ್ಮ ಜನ, ಬೇರೆ ಜನ ಅಲ್ಲ. ಅವರು ನಮ್ಮ ಅಣ್ಣ, ತಮ್ಮಂದಿರು‌‌. ಆದರೆ, ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದರು.

ಇದು 25 ವರ್ಷದಿಂದ ನಡೆಯುತ್ತಿದೆ. ಸದಾಶಿವ ಆಯೋಗದ ವರದಿಗೆ ನಮ್ಮ ಒಪ್ಪಿಗೆ ಇಲ್ಲ ಎಂದು ಹೇಳಿದ್ದೇವೆ. ಕಾನೂನಿನ ಚೌಕಟ್ಟಿನಲ್ಲಿ ನಮಗೆ ದೇವರಾಜ ಅರಸರು ಮೀಸಲಾತಿ ನೀಡಿದ್ದಾರೆ. ನಾನು ಬೇರೆ ಏನೂ ಹೇಳಿಲ್ಲ. ಇದು ನನ್ನ ವೈಯಕ್ತಿಕ ಹೇಳಿಕೆ. ಅವರು ಪ್ರತಿಭಟನೆ ಮಾಡುತ್ತಾರೋ, ಏನು ಮಾಡುತ್ತಾರೋ ಅವರಿಗೆ ಬಿಟ್ಟದ್ದು ಎಂದು ಹೇಳಿದರು.

ಸದಾಶಿವ ಆಯೋಗ ವರದಿ ಜಾರಿಗೆ ನಾವು ಒಪ್ಪುವುದಿಲ್ಲ ಎಂದು ಸಚಿವ ಪ್ರಭು ಚೌಹಾಣ್ ನಿನ್ನೆ ಕೊಪ್ಪಳ ತಾಲೂಕಿನ ಬಹದ್ದೂರ್​ ಬಂಡಿ ಗ್ರಾಮದಲ್ಲಿ ಹೇಳಿಕೆ ನೀಡಿದ್ದರು. ಸಚಿವರ ಈ ಹೇಳಿಕೆ ಖಂಡಿಸಿ ದಲಿತ ಸಂಘಟನೆಯ ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನದ ಮುಂದೆ ಧಿಕ್ಕಾರ ಕೂಗಿ, ಮುತ್ತಿಗೆ ಹಾಕಲು ಯತ್ನಿಸಿದ್ದರು.

ಇದನ್ನೂ ಓದಿ: ಸಚಿವ ಪ್ರಭು ಚವ್ಹಾಣ್​ಗೆ ಮುತ್ತಿಗೆ ಹಾಕಲು ಯತ್ನ: ದಲಿತ ಸಂಘಟನೆ ಕಾರ್ಯಕರ್ತರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.