ETV Bharat / state

ಗಂಗಾವತಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 60ಲಕ್ಷ ಹಣ, ಕಾರು ವಶಕ್ಕೆ ಪಡೆದ ಪೊಲೀಸರು..

ಕಾರಿನಲ್ಲಿ ಸೂಕ್ತ ದಾಖಲೆ ಇಲ್ಲದೆ 60 ಲಕ್ಷ ಹಣವನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ವಾಹನ ಸಮೇತ ನಗದನ್ನು ವಶಪಡಿಸಿಕೊಂಡಿದ್ದಾರೆ.

police-seized-60-lakh-money-for-without-documents-in-gangavati
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 60ಲಕ್ಷ ಹಣ, ಕಾರು ವಶಕ್ಕೆ ಪಡೆದ ಪೊಲೀಸರು..
author img

By

Published : Mar 25, 2023, 7:16 PM IST

ಗಂಗಾವತಿ(ಕೊಪ್ಪಳ): ಯಾವುದೇ ಸೂಕ್ತ ದಾಖಲೆ ಇರಿಸಿಕೊಳ್ಳದೇ 60 ಲಕ್ಷ ಮೊತ್ತದ ನಗದನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ವಾಹನ ಸಮೇತ ನಗದನ್ನು ವಶಪಡಿಸಿಕೊಂಡಿದ್ದಾರೆ. ಗಂಗಾವತಿ ಗ್ರಾಮೀಣ ಠಾಣೆ ವ್ಯಾಪ್ತಿಯ ಬಸವಪಟ್ಟಣದ ಹೊರ ವಲಯದಲ್ಲಿ ಈ ಘಟನೆ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಶೇಖರಪ್ಪ ಹಾಗೂ ಗ್ರಾಮೀಣ ಸಿಪಿಐ ಮಂಜುನಾಥ ದಾಳಿ ಮಾಡಿ ಹಣದ ಸಮೇತ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಗಂಗಾವತಿ ನಗರದ ನಿವಾಸಿಗಳಾದ ವೆಂಕಟೇಶ ಸಿಂಗನಾಳ, ವಿರೂಪಾಕ್ಷ ಗೌಡ, ವೀರಭದ್ರಪ್ಪ ಪಲ್ಲೇದ ಮತ್ತು ಖಾಸಗಿ ವಾಹನ ಚಾಲಕ ಅಬ್ದುಲ್ ರಜಾಕ್ ಸೇರಿ ಕಾರಿನಲ್ಲಿ ಹಣ ಸಾಗಿಸುತ್ತಿದ್ದರು. ಈ ಬಗ್ಗೆ ದಾಖಲೆ ಕೇಳಿದಾಗ ಯಾವುದೇ ಅಧಿಕೃತ ಮಾಹಿತಿ ನೀಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಭೇಟಿ: ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದ ಪ್ರಕರಣ ಭೇದಿಸಿದ ಹಿನ್ನೆಲೆ ಜಿಲ್ಲಾ ಎಸ್ಪಿ ಯಶೋಧಾ ಒಂಟಿಗೋಡೆ ಶನಿವಾರ ನಗರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಸದ್ಯಕ್ಕೆ ಹಣ ವಶಕ್ಕೆ ಪಡೆದು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ. ಹಣದ ವಾರಸುದಾರರಿಗೆ ವಾಣಿಜ್ಯ ಇಲಾಖೆಯಿಂದ ನೋಟಿಸ್ ನೀಡಿ ಹಣದ ಮೂಲ ಮತ್ತು ದಾಖಲೆ ಕೇಳಲಾಗುತ್ತದೆ ಎಂದರು.

ಸೂಕ್ತ ಮಾಹಿತಿ ನೀಡಿದ್ದಲ್ಲಿ ನ್ಯಾಯಾಲಯದ ವಶದಲ್ಲಿರುವ ಹಣವನ್ನು ವಾರಸುದಾರರಿಗೆ ಮರಳಿಸಲಾಗುತ್ತಿದೆ. ಇಲ್ಲವಾದಲ್ಲಿ ನಿಯಮಾನುಸಾರ ವಶಕ್ಕೆ ಪಡೆದ ಹಣ ಸರ್ಕಾರದ ಬೊಕ್ಕಸಕ್ಕೆ ಜಮೆಯಾಗುತ್ತದೆ. ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ. ಹಣದೊಂದಿಗೆ ಶಸ್ತಸ್ರ ಅಥವಾ ಮಾರಕಾಯುಧ ಸಾಗಿಸುತ್ತಿದ್ದ ಪ್ರಕರಣಗಳಿದ್ದರೆ ಮಾತ್ರ ಬಂಧಿಸಲಾಗುತ್ತದೆ. ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ. ಹಣದೊಂದಿಗೆ ಶಸ್ತ್ರಾಸ್ತ್ರ ಅಥವಾ ಮಾರಕಾಯುಧ ಸಾಗಿಸುತ್ತಿದ್ದ ಪ್ರಕರಣಗಳಿದ್ದರೆ ಮಾತ್ರ ಬಂಧಿಸಲಾಗುತ್ತದೆ ಎಂದು ಎಸ್ಪಿ ಯಶೋಧ ತಿಳಿಸಿದರು.

ಇದನ್ನೂ ಓದಿ:ಧಾರವಾಡ: ದಾಖಲೆ ಇಲ್ಲದ ₹53 ಲಕ್ಷ ಹಣ, ಕಾರು ಸೀಜ್

ದಾಖಲೆ ಇಲ್ಲದ 10 ಲಕ್ಷ ನಗದು ವಶಕ್ಕೆ ಪಡೆದಿದ್ದ ಪೊಲೀಸರು: ದಾಖಲೆ ಇಲ್ಲದೆ ಬಸ್ಸಿನಲ್ಲಿ ಸಾಗಿಸುತ್ತಿದ್ದ 10 ಲಕ್ಷ ರೂ ನಗದು ಹಣವನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಹೊರವಲಯದಲ್ಲಿರುವ ಕೃಷ್ಣಾ ನದಿಯ ನೀಲಮ್ಮನ ಸೇತುವೆ ಹತ್ತಿರದ ಚೆಕ್ ಪೋಸ್ಟ್​ನಲ್ಲಿ ಶುಕ್ರವಾರ ಪೊಲೀಸರು ವಶಪಡಿಸಿಕೊಂಡಿದ್ದರು. ಮುದ್ದೇಬಿಹಾಳದಿಂದ ತಂಗಡಗಿ, ಧನ್ನೂರ, ಹುನಗುಂದ ಮಾರ್ಗವಾಗಿ ಗಜೇಂದ್ರಗಡಕ್ಕೆ ಹೋಗುತ್ತಿದ್ದ ಬಸ್ಸನ್ನು ಪೊಲೀಸರು ತಪಾಸಣೆ ನಡೆಸಿದಾಗ ಗುಟ್ಕಾ ಚೀಲದಲ್ಲಿ 500, 200 ಮತ್ತು 50 ಮುಖಬೆಲೆ ನೋಟುಗಳು ಸೇರಿ ಒಟ್ಟು 10 ಲಕ್ಷ ನಗದು ಪತ್ತೆಯಾಗಿತ್ತು.

ಈ ವೇಳೆ ಹಣ ಸಾಗಿಸುತ್ತಿದ್ದ ವ್ಯಕ್ತಿ ಮುದ್ದೇಬಿಹಾಳದ ಸುಂದರ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಬಸಪ್ಪ ನಿಂಗಪ್ಪ ಹಡಗಲಿ ಎಂದು ಗುರುತಿಸಲಾಗಿತ್ತು. ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಬ್ಯಾಂಕ್​​ನಿಂದ ಬ್ಯಾಂಕಿಗೆ ವರ್ಗಾವಣೆ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದರು. ಆದರೆ ಹಣಕ್ಕೆ ಸಂಬಂಧಿಸಿದಂತೆ ಇವರ ಬಳಿ ಯಾವುದೇ ದಾಖಲೆ ಇರಲಿಲ್ಲ. ಇದರಿಂದ ಸಂಶಯಗೊಂಡ ಪೊಲೀಸ್ ಅಧಿಕಾರಿಗಳು, ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.