ಕೊಪ್ಪಳ: ಬೈಕ್ ಸ್ಕಿಡ್ ಆಗಿ ಬಿದ್ದು ಪೊಲೀಸ್ ಪೇದೆಯೊಬ್ಬ ಮೃತಪಟ್ಟು, ಮತ್ತೊಬ್ಬ ಗಾಯಗೊಂಡ ಘಟನೆ ತಾಲೂಕಿನ ಹಟ್ಟಿ ಕ್ರಾಸ್ ಬಳಿ ನಡೆದಿದೆ.
ಮೃತಪಟ್ಟ ಪೇದೆಯನ್ನು ರವಿ ಕನ್ನೇರಮಡು (34) ಎಂದು ಗುರುತಿಸಲಾಗಿದೆ.
ಮೃತ ರವಿ ಯಲಬುರ್ಗಾ ತಾಲೂಕಿನ ಬೇವೂರ್ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಕೊಪ್ಪಳದಿಂದ ಬೇವೂರಿಗೆ ಸಂಜೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.