ಕೊಪ್ಪಳ: ಗಣೇಶ ಹಬ್ಬದ ಬಂದೋಬಸ್ತ್ ಕೆಲಸಕ್ಕೆಂದು ಗಜೇಂದ್ರಗಡಕ್ಕೆ ತೆರಳಿದ್ದ ಗದಗ ಜಿಲ್ಲೆ ಮುಂಡರಗಿ ಠಾಣೆಯ ಇಬ್ಬರು ಪೊಲೀಸರು ಯಲಬುರ್ಗಾ ತಾಲೂಕಿನ ತೊಂಡಿಹಾಳ ಗ್ರಾಮದ ಪಕ್ಕದ ಹಳ್ಳದಲ್ಲಿ ರಾತ್ರಿ ಕೊಚ್ಚಿ ಹೋಗಿದ್ದರು. ಅದರಲ್ಲಿಗ ಒಬ್ಬರ ಶವ ಪತ್ತೆಯಾಗಿದೆ. ಕಾನ್ಸ್‌ಟೇಬಲ್‌ಗಳಾದ ಮಹೇಶ ವಕ್ಕರದ ಮತ್ತು ನಿಂಗಪ್ಪ ಹಲವಾಗಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ಕೊಪ್ಪಳ, ಗದಗ ಜಿಲ್ಲೆಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಳಗ್ಗೆಯಿಂದಲೇ ಅವರಿಗಾಗಿ ಹುಡುಕಾಟ ನಡೆಸಿದ್ದರು. ಮಧ್ಯಾಹ್ನ ಎರಡುಗಂಟೆ ಸುಮಾರಿಗೆ ನಿಂಗಪ್ಪ ಹಲವಾಗಲಿ ಅವರ ಮೃತದೇಹ ಪತ್ತೆಯಾಗಿದೆ. ಬಂದೋಬಸ್ತಿಗಾಗಿ ಮುಂಡರಗಿಯಿಂದ ಒಟ್ಟು ಎಂಟು ಜನ ಸಿಬ್ಬಂದಿ ಗಜೇಂದ್ರಗಡಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಪೊಲೀಸರ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಇನ್ನೊಬ್ಬರ ಪತ್ತೆಗಾಗಿ ಚುರುಕಿನಿಂದ ಶೋಧ ಕಾರ್ಯ ನಡೆದಿದೆ. ಸುತ್ತಮುತ್ತಲೂ ಇರುವ ಹಳ್ಳಗಳಲ್ಲಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ.
ಇದನ್ನೂ ಓದಿ: ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಪ್ರವಾಹ.. ಇಬ್ಬರು ಪೊಲೀಸರು ಹಳ್ಳದಲ್ಲಿ ಕೊಚ್ಚಿಹೋಗಿರುವ ಶಂಕೆ!