ETV Bharat / state

ಒಂದೇ ಸಮುದಾಯದವರ ಮೇಲೆ ಎಫ್ಐಆರ್: ನಾಯಕ ಸಮುದಾಯದಿಂದ ಆಕ್ಷೇಪ

ಹಬ್ಬ ಆಚರಣೆಯ ಸಂದರ್ಭದಲ್ಲಿ ಕಾನ್ಸ್​ಟೇಬಲ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಕಪಕ್ಷೀಯವಾಗಿ ದೂರು ದಾಖಲಿಸಿದ್ದಾರೆ ಎಂದು ನಾಯಕ ಸಮುದಾಯ ತೀವ್ರ ಆರೋಪಿಸಿದೆ.

author img

By

Published : Sep 5, 2020, 8:35 AM IST

Updated : Sep 5, 2020, 9:33 AM IST

nayaka community
nayaka community

ಗಂಗಾವತಿ (ಕೊಪ್ಪಳ): ತಾಲೂಕಿನ ಆರ್ಹಾಳ ಗ್ರಾಮದಲ್ಲಿ ನಡೆದ ಮೋಹರಂ ಹಬ್ಬ ಆಚರಣೆಯ ಸಂದರ್ಭದಲ್ಲಿ ಕಾನ್ಟ್​ಟೇಬಲ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಕಪಕ್ಷೀಯವಾಗಿ ದೂರು ದಾಖಲಿಸಿದ್ದಾರೆ ಎಂದು ನಾಯಕ ಸಮುದಾಯದ ಮುಖಂಡರು ದೂರಿದ್ದಾರೆ.

ನಾಯಕ ಸಮುದಾಯದಿಂದ ಆಕ್ಷೇಪ

ಪ್ರಕರಣದಲ್ಲಿ ಸಂತ್ರಸ್ಥ ಸೋಮನಾಥ ನೀಡಿರುವ ದೂರು ಸಮಂಜಸವಾಗಿದ್ದರೂ ಕೇವಲ ಒಂದೇ ಸಮುದಾಯವನ್ನು ಏಕೆ ಗುರಿ ಮಾಡಲಾಗಿದೆ ಎಂಬುವುದನ್ನು ದೂರು ದಾಖಲಿಸಿಕೊಂಡ ಅಧಿಕಾರಿ ಸ್ಪಷ್ಟನೆ ನೀಡಬೇಕು, ಪ್ರಕರಣದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಎಫ್ಐಆರ್​ನಲ್ಲಿ ದಾಖಲಾದ 15 ಜನರಲ್ಲಿ 14 ಜನ ನಾಯಕ ಸಮುದಾಯಯಕ್ಕೆ ಸೇರಿದ್ದಾರೆ. ಊರಿನ ಹಬ್ಬ ಎಂದ ಮೇಲೆ ಎಲ್ಲಾ ಜಾತಿ ಜನಾಂಗದವರು ಪಾಲ್ಗೊಳ್ಳುತ್ತಾರೆ. ಆದರೆ ಪೊಲೀಸರು ಏಕ ಪಕ್ಷೀಯವಾಗಿ ಏಕೆ ಕೇವಲ ನಾಯಕ ಜನಾಂಗದವರನ್ನು ಎಫ್ಐಆರ್​ನಲ್ಲಿ ದಾಖಲಿಸಿದ್ದಾರೆ ಎಂದು ನಾಯಕ ಸಮುದಾಯದ ಮುಖಂಡರು ಠಾಣೆಗೆ ಆಗಿಮಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

people oppose case filed on only one community
ನಾಯಕ ಸಮುದಾಯದಿಂದ ಆಕ್ಷೇಪ

ಸಮಾಜದ ಕೊಪ್ಪಳ ಜಿಲ್ಲಾ ಅಧ್ಯಕ್ಷ ರತ್ನಾಕರ ನೇತೃತ್ವದಲ್ಲಿ ನಾಯಕ ಸಮುದಾಯದವರು ಠಾಣೆಗೆ ಆಗಮಿಸಿದ್ದರು.

Last Updated : Sep 5, 2020, 9:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.