ಕೊಪ್ಪಳ : ಮದುವೆ ಕಾರ್ಯಕ್ರಮದಲ್ಲಿ ತಂಗಳು ಆಹಾರ ಸೇವಿಸಿ ಮಕ್ಕಳು ಸೇರಿ ಸುಮಾರು 40 ಜನ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಲೇಗುಡ್ಡ ಗ್ರಾಮದಲ್ಲಿ ನಡೆದಿದೆ. ಅಸ್ವಸ್ಥಗೊಂಡವರು ಕೊಪ್ಪಳ ಹಾಗೂ ಯಲಬುರ್ಗಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಮದುವೆಯಾದ ಬಳಿಕ ವಧುವನ್ನು ಗಂಡನ ಮನೆಗೆ ಕರೆತಂದ ಸಂದರ್ಭದಲ್ಲಿ ತಂದ ಅಡುಗೆಯನ್ನು ಊಟ ಮಾಡಿದ ನಂತರ ಕೆಲವರಿಗೆ ವಾಂತಿ-ಬೇಧಿ ಶುರುವಾಗಿದೆ. ಮಕ್ಕಳು ಸೇರಿ ಸುಮಾರು 40 ಜನರು ಅಸ್ವಸ್ಥಗೊಂಡು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. 10 ಜನರು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಮದುವೆ ಕುಷ್ಟಗಿಯಲ್ಲಿ ನಡೆದಿತ್ತು.
ಓದಿ: ಡ್ರಗ್ಸ್ ಕೇಸ್: ಬೆಂಗಳೂರಿನಲ್ಲಿ ಮಂಗಳೂರಿನ ಕುಖ್ಯಾತ ರೌಡಿಶೀಟರ್ ಸೇರಿ ಇಬ್ಬರು ಅರೆಸ್ಟ್