ETV Bharat / state

ಪೇಜಾವರ ಶ್ರೀಗೆ ವಿವಿಧ ಮಠಗಳ ಮಠಾಧೀಶರಿಂದ ಸಂತಾಪ - Pejawara Shree no more

ಪೇಜಾವರ ಶ್ರೀ ವಿಶ್ವೇಶತೀರ್ಥ ಪಾದಂಗಳವರು ವಿಧಿವಶರಾದ ಹಿನ್ನೆಲೆಯಲ್ಲಿ ತರಳಬಾಳು ಜಗದ್ಗುರು  ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ,  ಗುಳೇದಗುಡ್ಡ ಪಟ್ಟಣದ ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿ ಹಾಗೂ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

pontiff  Condolences
ಪೇಜಾವರ ಶ್ರೀ ವಿಧಿವಶ: ವಿವಿಧ ಮಠಗಳ ಮಠಾಧೀಶರಿಂದ ಸಂತಾಪ
author img

By

Published : Dec 29, 2019, 3:09 PM IST

ದಾವಣಗೆರೆ/ಬಾಗಲಕೋಟೆ/ಕೊಪ್ಪಳ: ಪೇಜಾವರ ಶ್ರೀ ನಿಧನ ಹಿನ್ನಲೆ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಗುಳೇದಗುಡ್ಡ ಪಟ್ಟಣದ ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿ ಹಾಗೂ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ

ದಾವಣಗೆರೆ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಂತಾಪ ಸೂಚಿಸಿದ್ದು, ಅವರ ಜೊತೆಗಿನ ಒಡನಾಟದ ಬಗ್ಗೆ ವಿವರಿಸಿದ್ದಾರೆ. ಶ್ರೀಗಳು ವಾಮನನಂತೆ ಕೃಶಕಾಯರಾದರೂ ಧಾರ್ಮಿಕ ಕ್ಷೇತ್ರದಲ್ಲಿ ಆಕಾಶಕ್ಕೆ ಬೆಳೆದು ನಿಂತಿರುವ ತ್ರಿವಿಕ್ರಮನಂತೆ ಇದ್ದರು. ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಬಂದಿದ್ದ ಶ್ರೀಗಳು ತರಳಬಾಳು ಮತ್ತು ಪೇಜಾವರ ಮಠದ ಮಧ್ಯೆ ಇರುವ ಸುಮಧುರ ಬಾಂಧವ್ಯ ಸ್ಮರಿಸಿದ್ದಾರೆ.

ಬಾಗಲಕೋಟೆಯ ಗುಳೇದಗುಡ್ಡ ಪಟ್ಟಣದ ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಸಂತಾಪ ಸೂಚಿಸಿದ್ದು, ಜಾತ್ಯಾತೀತ ಮನೋಭಾವನೆ ಹೊಂದಿರುವ ಶ್ರೀಗಳು, ಬಡವರು ಶ್ರೀಮಂತರು ಎನ್ನದೇ ದೀನ ದಲಿತರು ಎನ್ನದೇ ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಶ್ರೀಗಳು ಅಗಲಿರುವುದು ಇಡೀ ದೇಶಕ್ಕೆ ನಷ್ಟ ಉಂಟಾಗಿದೆ ಎಂದರು.
ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಶ್ರೀಗಳ ವ್ಯಕ್ತಿತ್ವ ಅನುಕರಣೀಯ. ಅವರದ್ದು ಪುಟ್ಟ ದೇಹ, ದಿಟ್ಟ ಮಾತು. ಮುಖದಲ್ಲಿ ಸದಾ ದೈವೀಕಳೆ, ಮನದಲ್ಲಿ ಸದಾ ದೇಶ ಪ್ರೇಮವಿತ್ತು ಎಂದು ಬಣ್ಣಿಸಿದರು. ಪೇಜಾವರ ಶ್ರೀಪಾದಂಗಳವರು ಜನರ ಕಣ್ಣಿನಿಂದ ಈಗ ದೂರವಾಗಿರಬಹುದು, ಮಣ್ಣಲ್ಲಿ ಮರೆಯಾಗಿರಬಹುದು. ಆದರೆ, ಲಕ್ಷ ಲಕ್ಷ ಭಕ್ತರ ಹೃದಯದಿಂದ ದೂರ ಆಗುವ ವ್ಯಕ್ತಿತ್ವ ಅವರದ್ದಲ್ಲ. ಅಂತಹ ಆಧ್ಯಾತ್ಮ ಚೇತನ ಅಗಲಿದ್ದು ಈ ನಾಡಿಗೆ ತುಂಬಲಾಗದ ಹಾನಿ. ಅವರ ಆದರ್ಶಗಳು, ಆಲೋಚನೆಗಳು ನಮಗೆ ಬೆಳಕಾಗಲಿ ಎಂದರು.

Intro:ದಾವಣಗೆರೆ; ಪೇಜಾವರ ಶ್ರೀ ವಿಶ್ವತೀರ್ಥ ಪಾದಂಗಳವರು ನಿಧನ ಹಿನ್ನಲೆ ತರಳಬಾಳು ಜಗದ್ಗುರು 1108 ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಂತಾಪ ಸೂಚಿಸಿದ್ದು, ಅವರ ಜೊತೆ ಒಡನಾಟದ ಬಗ್ಗೆ ವಿವರಿಸಿದ್ದಾರೆ..

Body:ವಾಮನನಂತೆ ಕೃಶಕಾಯರಾದರೂ ಧಾರ್ಮಿಕ ಕ್ಷೇತ್ರದಲ್ಲಿ ಆಕಾಶಕ್ಕೆ ಬೆಳೆದು ನಿಂತಿರುವ ತ್ರಿವಿಕ್ರಮನಂತೆ ಇದ್ದರು ಎಂದು ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಬಂದಿದ್ದ ಶ್ರೀಗಳು ತರಳಬಾಳು ಮತ್ತು ಪೇಜಾವರ ಮಠದ ಮಧ್ಯೆ ಇರುವ ಸುಮಧುರ ಬಾಂಧವ್ಯವನ್ನು ಸ್ಮರಿಸಿದ್ದಾರೆ..

ಇದೇ ತಿಂಗಳು 7 ರಂದು ಚಿತ್ರದುರ್ಗದಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿದ್ದರು. ಆ ದಿನ ಅದೇ ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳು ದಯ ಮಾಡಿಸುತ್ತಾರೆಂದು ತಿಳಿದು ತುಂಬಾ ಸಂತೋಷವಾಗಿತ್ತು. ಅವರನ್ನು ನೋಡದೇ ಬಹಳ ವರ್ಷಗಳೇ ಆಗಿದ್ದವು. ಪರ್ಯಾಯ ಪೀಠದಲ್ಲಿದ್ದ ಅವರು ನಮ್ಮನ್ನು ಉಡುಪಿಗೆ ಆಹ್ವಾನಿಸಿದ್ದರು. ಆದರೆ, ಕಾರ್ಯ ಗೌರವದ ನಿಮಿತ್ತ ಒಪ್ಪಿಕೊಳ್ಳಲು ಆಗಿರಲಿಲ್ಲ. ಒಂದೆರೆಡು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದರೂ ಆವರನ್ನು ಮುಖತಃ ಮಾತನಾಡಬೇಕೆಂಬ ಹಂಬಲ ಬಹಳವಾಗಿತ್ತು. ಆದರೆ, ಆದಿನ ಚಿತ್ರದುರ್ಗದ ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣಗಳಿಂದ ಬರದೇ ಇದ್ದ ಕಾರಣ ನಿರಾಶೆ ಉಂಟಾಗಿತ್ತು. ಮರುದಿನ ಭಾನುವಾರ ಆಗಮಿಸಿದ್ದ ಅವರು ದೂರವಾಣಿಯಲ್ಲಿ ಸಂಪರ್ಕಿಸಿ ಸಿರಿಗೆರೆಗೆ ಬಂದು ಮಾತನಾಡುವ ಅಪೇಕ್ಷೆ ವ್ಯಕ್ತಪಡಿಸಿದರು. ಆದರೆ ಆದಿನ ಬೇರೊಂದು ಕಾರ್ಯಕ್ರಮ ನಿಮಿತ್ತ ಸಿರಿಗೆರೆಯಲ್ಲಿ ಇಲ್ಲದ ಕಾರಣ ಅವರನ್ನು ಮಠಕ್ಕೆ ಬರ ಮಾಡಿಕೊಳ್ಳಲು ಆಗಲಿಲ್ಲ. ಸನಿಹದಲ್ಲಿಯೇ ಅವರನ್ನು ಕಾಣುವ ಸಲುವಾಗಿ ಉಡುಪಿಗೆ ಬರುವುದಾಗಿ ಹೇಳಿದ್ದೆವು. ಆದರೆ, ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಕಳೆದ ಶುಕ್ರವಾರ ಹಳೇಬೀಡಿಗೆ ಹೋದಾಗ ಅವರ ಆರೋಗ್ಯ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಎಂಬ ವಿಷಯ ತಿಳಿದು ಘಾಸಿಕೊಂಡು ಅದೇ ದಿನ ಸಿರಿಗೆರೆಯಲ್ಲಿ ನಮ್ಮ ಮಠದ ಕಾರ್ಯಕ್ರಮವಿದ್ದರೂ ಲೆಕ್ಕಿಸದೆ ಉಡುಪಿಗೆ ತೆರಳಿದ್ದೆವು. ಆಗ ತೀವ್ರ ನಿಗಾ ಘಟಕಕ್ಕೆ ಕರೆದುಕೊಂಡು ಹೋದರು ಎಂದು ನೆನಪು ಮಾಡಿಕೊಂಡಿದ್ದಾರೆ..

ಶರಣ ನಿದ್ರೆ ಗೈದಡೆ ಜಪ ಕಾಣಿರೋ ಎನ್ನುವಂತೆ ಶ್ರೀಗಳು ಸುತ್ತಲು ಪರಿವೆ ಇಲ್ಲದೆ ಸ್ಮಿತಪ್ರಜ್ಞರಂತೆ ಪವಡಿಸಿದ್ದರು. ಮುಖತಃ ಭೇಟಿಯಾದರೂ ಮಾತನಾಡಲಿಲ್ಲವೆಂಬ ವಿಷಾದ ನಮ್ಮನ್ನು ಆವರಿಸಿತು. ಅವರ ಆರೋಗ್ಯದ ಬಗ್ಗೆ ವೈದ್ಯರನ್ನು ವಿಚಾರಿಸಿ ಕೆಲಹೊತ್ತು ಇದ್ದು ನಮ್ಮ ಗೌರವವನ್ನು ಸಲ್ಲಿಸಿ ಆಸ್ಪತ್ರೆಯಿಂದ ನಿರ್ಗಮಿಸುವಾಗ ಗತಕಾಲದ ನೆನಪಿನ ಸುರುಳಿ ಉರುಳತೊಡಗಿತು. ಪೇಜಾವರ ಶ್ರೀ ವಿಶ್ವತೀರ್ಥ ಪಾದಂಗಳವರು ನಮ್ಮ ಲಿಂಗೈಕ್ಯ ಗುರುವರ್ಯರ ಕಾಲದಿಂದಲೂ ನಮ್ಮ ಮಠದೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದವರು. ಪಾಣನೀಯ ಸೂತ್ರಗಳನ್ನು ಗಣಕಯಂತ್ರಕ್ಕೆ ಅಳವಡಿಸಿ ನಾವು ಸಿದ್ದಪಡಿಸಿದ ಗಣಕಾಷ್ಟಾಧ್ಯಾಯೀ ಎಂಬ ತಂತ್ರಾಂಶವನ್ನು ಒಮ್ಮೆ ಅವರಿಗೆ ತೋರಿಸಿದಾಗ ಶ್ರೀಕೃಷ್ಣನ ಬಾಯಲ್ಲಿ ವಿಶ್ವರೂಪ ದರ್ಶನ ಮಾಡಿಸಿದಂತಾಯಿತು ಎಂದು ಹೃದಯ ತುಂಬಿ ಕೊಂಡಾಡಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ..

ಪ್ಲೊ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.