ಕೊಪ್ಪಳ: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ಓಜಿನಹಳ್ಳಿ ರಸ್ತೆಯಲ್ಲಿ ನಡೆದಿದೆ.
ರೇಣುಕಪ್ಪ(50) ಮೃತ ವ್ಯಕ್ತಿ. ಮೃತ ರೇಣುಕಪ್ಪ ಓಜಿನಹಳ್ಳಿ ಗ್ರಾಮದಿಂದ ಭಾಗ್ಯನಗರಕ್ಕೆ ಬರುತ್ತಿದ್ದಾಗ ಹಿಂದಿನಿಂದ ಬಾಲಕನೊಬ್ಬ ಬೈಕ್ ಡಿಕ್ಕಿ ಹೊಡೆಸಿದ್ದಾನೆ.
ಪರಿಣಾಮ ರೇಣುಕಪ್ಪ ಸ್ಥಳದಲ್ಲಿ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.