ಕೊಪ್ಪಳ: ರೈತರೊಬ್ಬರ ಹೊಲದಲ್ಲಿ ಎರಡು ಕರಡಿಗಳು ಪ್ರತ್ಯಕ್ಷವಾಗಿದ್ದು, ಸ್ಥಳದಲ್ಲಿದ್ದವರುವವರು ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಕುಷ್ಟಗಿ ತಾಲೂಕಿನ ಹೊನಗಡ್ಡಿ ಗ್ರಾಮದ ರಾಮಪ್ಪ ಮ್ಯಾದನೇರಿ ಎಂಬುವರ ಹೊಲದಲ್ಲಿ ಎರಡು ಕರಡಿಗಳು ಪ್ರತ್ಯಕ್ಷವಾಗಿವೆ.
ಜೋಡಿ ಕರಡಿಗಳನ್ನು ನೋಡಿದ ರೈತರು ಜೋರಾಗಿ ಕೂಗಾಡಿದ್ದಾರೆ. ರೈತರ ಕೂಗಾಟದಿಂದ ಕರಡಿಗಳು ಬೆದರಿ ಸ್ಥಳದಿಂದ ಕಾಲ್ಕಿತ್ತಿವೆ ಎಂದು ತಿಳಿದುಬಂದಿದೆ. ಹಗಲು ಹೊತ್ತಿನಲ್ಲಿಯೇ ಕರಡಿಗಳು ಜಮೀನಿನಲ್ಲಿ ಪ್ರತ್ಯಕ್ಷವಾಗಿರುವುದನ್ನು ಕಂಡು ರೈತರು ಆತಂಕಗೊಂಡಿದ್ದಾರೆ.
ಇದನ್ನೂ ಓದಿ: ಮುಂಗಾರು ಮಳೆಗೆ ಮಸ್ಕಿ ಜಲಾವೃತ.. ವರುಣನ ಆರ್ಭಟಕ್ಕೆ ನಲುಗಿದ ಜನ