ಗಂಗಾವತಿ: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಭತ್ತದ ಬೆಳೆ ನಾಶವಾಗಿದ್ದು, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಅವರು ಕನಕಗಿರಿ ವಿಧಾನಸಭಾ ಕ್ಷೇತ್ರದ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
![Paddy Damage in Gangavathi](https://etvbharatimages.akamaized.net/etvbharat/prod-images/kn-gvt-04-07-exminister-visit-to-lossed-paddy-feild-kac10005_07042020215559_0704f_1586276759_572.jpg)
ಗಂಗಾವತಿ ತಾಲೂಕಿನ ಹೇರೂರು, ಕೇಸರಹಟ್ಟಿ, ಮಸಾರಿಕ್ಯಾಂಪ್, ಗುಳದಳ್ಳಿ, ಕಲ್ಗುಡಿ ಸೇರಿದಂತೆ ಮರಳಿ ಹೋಬಳಿಯ ನಾನಾ ಗ್ರಾಮಗಳಲ್ಲಿ ಸಂಚರಿಸಿ ರೈತರ ಹೊಲಕ್ಕೆ ಭೇಟಿ ನೀಡಿ ಭತ್ತದ ಬೆಳೆ ಹಾನಿಯಾದ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.
ಇನ್ನೂ, ಈ ಬಗ್ಗೆ ಬಳಿಕ ಮಾತನಾಡಿದ ಅವರು, ಭತ್ತ ಹಾನಿ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಹಾನಿಗೀಡಾದ ರೈತರಿಗೆ ಆರ್ಥಿಕ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯಿಸಲಾಗುವುದು. ಅಲ್ಲದೇ ಕಂದಾಯ, ಕೃಷಿ ಇಲಾಖೆಗಳ ಜಂಟಿ ಕಾರ್ಯಚರಣೆಗೆ ಒತ್ತಾಯಿಸಲಾಗುವುದು ಎಂದರು.