ಗಂಗಾವತಿ: ದಾಖಲೆ ಪ್ರಮಾಣದ ಸಹಜ ಹೆರಿಗೆ, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಚಿಕಿತ್ಸೆ, ಗುಣಮಟ್ಟದ ಆರೈಕೆ ಮೊದಲಾದ ಅಂಶಗಳಿಂದ ರಾಜ್ಯಮಟ್ಟದಲ್ಲಿ ಸದ್ದು ಮಾಡಿರುವ ಇಲ್ಲಿನ ಉಪ ವಿಭಾಗ ಸರ್ಕಾರಿ ಆಸ್ಪತ್ರೆಗೆ ಕೇಂದ್ರ ಸರ್ಕಾರದಿಂದ ಆಕ್ಸಿಜನ್ ಘಟಕ ಮಂಜೂರಾಗಿದೆ.
ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಇಡೀ ಕೊಪ್ಪಳ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಇಲ್ಲಿನ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಅಗತ್ಯ ಸೌಕರ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಈಗ ಆಕ್ಸಿಜನ್ ಘಟಕ ಮಂಜೂರಾಗಿದೆ. ರಾಜ್ಯದ ನಾನಾ ಜಿಲ್ಲೆಗಳಿಗೆ ಒಟ್ಟು 28 ಆಕ್ಸಿಜನ್ ಜನರೇಷನ್ ಪ್ಲಾಂಟ್ ಮಂಜೂರಾಗಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿಯ ಉಪ ವಿಭಾಗ ಆಸ್ಪತ್ರೆಯಲ್ಲಿ ಸ್ಥಾಪಿಸಲು ಉದ್ದೇಶಿಸಿ 1000 ಎಲ್ಪಿಎಂ ಸಾಮರ್ಥ್ಯದ ಘಟಕ ಮಂಜೂರಾಗಿದೆ.
![oxygen-unit-sanctioned-for-gangavathi-subdivision-hospital](https://etvbharatimages.akamaized.net/etvbharat/prod-images/kn-gvt-3-14-1000-lpm-capacity-oxigyen-unit-sanction-for-gvt-vis-kac10005_14052021180149_1405f_1620995509_1041.jpg)
ಈ ಬಗ್ಗೆ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ ಕರಡಿ ಸಂಗಣ್ಣ, ಗಂಗಾವತಿಗೆ ಆಕ್ಸಿಜನ್ ಘಟಕ ಮಂಜೂರಾಗಿದೆ. ಅದರ ಪೂರ್ಣ ಮಾಹಿತಿ, ಸಾಮರ್ಥ್ಯ, ವಿವರವನ್ನು ಶೀಘ್ರ ನೀಡಲಾಗುವುದು ಎಂದರು.