ETV Bharat / state

OXYZEN CONCENTRATOR: ಅಮೆರಿಕ ಹಾಗೂ ಕೆನಡಾದಿಂದ ಗಂಗಾವತಿ ಆಸ್ಪತ್ರೆಗೆ ದೇಣಿಗೆ - OXYZEN CONCENTRATOR,

ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಅಮೆರಿಕ ಹಾಗೂ ಕೆನಡಾದಲ್ಲಿರುವ ಅನಿವಾಸಿ ಭಾರತೀಯರ ಮೂರು ಸಂಘ ಸಂಸ್ಥೆಗಳಿಂದ 19 OXYZEN CONCENTRATOR ಕಳುಹಿಸಲಾಗಿದೆ.

Oxygen Concentrator
ಆಕ್ಸಿಜನ್ ಕಾನ್ಸನ್ಟ್ರೇಟರ್
author img

By

Published : May 27, 2021, 2:46 PM IST

ಕೊಪ್ಪಳ: ಕೊರೊನಾ ಸೋಂಕಿನ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಸೋಂಕಿತರ ನೆರವಿಗೆ ಹಲವರು ಕೈ ಜೋಡಿಸಿದ್ದು, ಕೆನಡಾದಲ್ಲಿರುವ ಅನಿವಾಸಿ ಭಾರತೀಯರು ಸಹಾಯದ ಹಸ್ತ ಚಾಚಿದ್ದಾರೆ.

ಜಿಲ್ಲೆಯ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಅಮೆರಿಕ ಹಾಗೂ ಕೆನಡಾದಲ್ಲಿರುವ ಅನಿವಾಸಿ ಭಾರತೀಯ ಮೂರು ಸಂಘ ಸಂಸ್ಥೆಗಳು 19 ಆಕ್ಸಿಜನ್ ಕಾನ್ಸನ್​​ಟ್ರೇಟರ್​ ಕಳುಹಿಸಿದ್ದಾರೆ. ಕೊರೊನಾ ಸೋಂಕಿತರಿಗೆ ಆಕ್ಸಿಜನ್ ನೀಡಲು ಹಲವಾರು ಯಂತ್ರಗಳನ್ನು ಬಳಸಲಾಗುತ್ತಿದೆ. ಅದರಲ್ಲಿ ತಕ್ಷಣವೇ ಲಭ್ಯವಾಗುವ ಕಾನ್ಸನ್​ಟ್ರೆಟರ್​ಗಳಿಗೆ ಈಗ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಅಮೆರಿಕ ಹಾಗೂ ಕೆನಡಾದಲ್ಲಿರುವ ಅನಿವಾಸಿ ಭಾರತೀಯರ ಸಂಘ ಸಂಸ್ಥೆಗಳಾದ ಆಶಾ ಜ್ಯೋತಿ ಫೌಂಡೇಶನ್, ಹಾರ್ಟ್ ಆಫ್ ಇಂಡಿಯಾ, ಮಿಷನ್ ಆಕ್ಸಿಜನ್ ಸಂಸ್ಥೆಗಳಿಂದ 19 ಕಾನ್ಸನ್​ಟ್ರೇಟರ್​ಗಳನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ನೀಡಿದ್ದಾರೆ. ಇದರೊಂದಿಗೆ ಮಾಸ್ಕ್ ಹಾಗು ಸ್ಯಾನಿಟೈಸರ್​ಗಳನ್ನು ಸಹ ಕಳುಹಿಸಿದ್ದಾರೆ.

ಇದೇ ಸಮಯಕ್ಕೆ ರಾಜ್ಯ ಸರ್ಕಾರದಿಂದಲೂ 10 ಕಾನ್ಸನ್​ಟ್ರೇಟರ್​ಗಳು ಗಂಗಾವತಿಗೆ ಬಂದಿದ್ದು, ಒಟ್ಟು 29 ಕಾನ್ಸನ್​ಟ್ರೇಟರ್​ಗಳನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ವಿದೇಶದಿಂದ ಗಂಗಾವತಿಗೆ ಕಾನ್ಸನ್​ಟ್ರೇಟರ್​ ಗಳು ಬರಲು ಗಂಗಾವತಿಯ ಸಂತೋಷ ಕೆಲೋಜಿ ಕಾರಣವಾಗಿದ್ದಾರೆ. ವಿದೇಶದಲ್ಲಿರುವ ಅನಿವಾಸಿ ಭಾರತೀಯರು ಸಂತೋಷ ಅವರ ಸ್ನೇಹಿತರಾಗಿದ್ದಾರೆ.

ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ಪ್ರಕರಣ: ಸಿಸಿಬಿ ಪೊಲೀಸರಿಂದ ಮತ್ತಿಬ್ಬರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.