ಗಂಗಾವತಿ: ಕೊರೊನಾ ಭೀತಿ ಹಿನ್ನೆಲೆ ಎಲ್ಲ ಹೊರ ರೋಗಿ ಚಿಕಿತ್ಸೆಗಳನ್ನು ಬಂದ್ ಮಾಡಲು ವೈದ್ಯರು ತೀರ್ಮಾನಿಸಿದ್ದಾರೆ.
ಮಾರ್ಚ್ 31ರವರೆಗೆ ಸಾಮಾನ್ಯ ಹಾಗೂ ತುರ್ತು ಅಲ್ಲದ ಎಲ್ಲಾ ಹೊರ ರೋಗಿಗಳ ಚಿಕಿತ್ಸೆ ಬಂದ್ ಮಾಡಿ ಕೇವಲ ಒಳರೋಗಿಗಳಾಗಿ ದಾಖಲಾಗುವವರಿಗೆ ಮತ್ತು ಗಂಭೀರ, ತುರ್ತು ಚಿಕಿತ್ಸೆಗೆ ಮಾತ್ರ ಆದ್ಯತೆ ನೀಡುವ ನಿರ್ಧಾರಕ್ಕೆ ಬರಲಾಗಿದೆ. ಜಿಲ್ಲಾದ್ಯಂತ ನಿಷೇಧಾಜ್ಞೆ ಇದ್ದರೂ, ಜನ ಗುಂಪು ಗುಂಪಾಗಿ ಚಿಕಿತ್ಸೆಗೆ ಆಗಮಿಸುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಯ ವೈದ್ಯರು, ಆಸ್ಪತ್ರೆಯ ಹೊರಗೆ ಕುಳಿತುಕೊಂಡು ರೋಗಿಗಳನ್ನು ತಪಾಸಣೆ ಮಾಡಿ ಮನೆಗೆ ಕಳುಹಿಸಿಕೊಟ್ಟರು.
ಅಲ್ಲದೆ ಚಿಕಿತ್ಸೆಗೆ ಎಂದು ಬರುತ್ತಿದ್ದ ಎಲ್ಲಾ ಸಾರ್ವಜನಿಕರನ್ನು ಸ್ಕ್ರೀನಿಂಗ್ಗೆ ಒಳಪಡಿಸಿ, ದೈಹಿಕ ಉಷ್ಣಾಂಶ ತಪಾಸಣೆ ಮಾಡುತ್ತಿದ್ದ ದೃಶ್ಯ ಆಸ್ಪತ್ರೆಯ ಹೊರಾಂಗಣದಲ್ಲಿ ಕಂಡು ಬಂತು.