ETV Bharat / state

450 ಶಿಕ್ಷಕರಿಗೆ ಆನ್​ಲೈನ್​​ ತರಬೇತಿ: ಶಿಕ್ಷಕನ ಈ ಸಾಧನೆಗೆ ಶಿಕ್ಷಣ ಇಲಾಖೆಯಿಂದ ಪ್ರಶಂಸೆ - ಶಿಕ್ಷಕರಿಗೆ ಆನ್​ಲೈನ್​​ ತರಬೇತಿ

450ಕ್ಕೂ ಹೆಚ್ಚು ಶಿಕ್ಷಕರಿಗೆ ವೃತ್ತಿ ಮಾರ್ಗದರ್ಶನ ಮಾಡಿದ ನಗರದ ಶಿಕ್ಷಕ ಶಶಿ ಭೂಷಣ ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಚೀನಿ ಆ್ಯಪ್​ಗಳು ಹೆಚ್ಚಾಗಿ ಬಳಕೆಯಾಗುತ್ತಿರುವ ನಡುವೆಯೂ ತಮ್ಮ ಸಹಪಾಠಿ ಶಿಕ್ಷಕರಿಗೆ ಮೈಕ್ರೋಸಾಫ್ಟ್ ಭೀಮ್ ಆ್ಯಪ್ ಮೂಲಕ ತರಬೇತಿ ನೀಡಿರುವುದು ಗಮನಾರ್ಹ.

Online training for 450 teachers
450 ಶಿಕ್ಷಕರಿಗೆ ಆನ್​ಲೈನ್​​ ತರಬೇತಿ: ಶಿಕ್ಷಕನ ಈ ಸಾಧನೆಗೆ ಆಯುಕ್ತ ಪ್ರಶಂಸೆ
author img

By

Published : Sep 5, 2020, 1:54 PM IST

ಗಂಗಾವತಿ: ಕೊರೊನಾ ತಡೆಗೆ ಘೋಷಣೆಯಾದ ಲಾಕ್​​ಡೌನ್​​ ಸಂದರ್ಭದಲ್ಲಿ ಮನೆಯಲ್ಲಿಯೇ ಸುರಕ್ಷಿತವಾಗಿದ್ದು, ಆನ್​ಲೈನ್​​ ಮೂಲಕ ಕಲ್ಯಾಣ ಕರ್ನಾಟಕದ 450ಕ್ಕೂ ಹೆಚ್ಚು ಶಿಕ್ಷಕರಿಗೆ ವೃತ್ತಿ ಮಾರ್ಗದರ್ಶನ ಮಾಡಿದ ನಗರದ ಶಿಕ್ಷಕ ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Online training for 450 teachers
ಅಭಿನಂದನಾ ಪತ್ರ

ನಗರದ ಸಿಬಿಎಸ್ ವೃತ್ತದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಶಶಿ ಭೂಷಣ ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಲಿನ್ ಅತುಲ್​ ಅವರ ಪ್ರಶಂಸೆಗೆ ಪಾತ್ರರಾಗಿದ್ದು, ಇಲಾಖೆಯಿಂದ ಅಭಿನಂದನಾ ಪತ್ರವನ್ನೂ ಸಹ ಪಡೆದಿದ್ದಾರೆ. ಲಾಕ್​ಡೌನ್​​ ಸಂದರ್ಭದಲ್ಲಿಯೂ 2020-21ನೇ ಶೈಕ್ಷಣಿಕ ವರ್ಷದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಈ ಶಿಕ್ಷಕ, ಚಿತ್ರಕಲಾ ಶಿಕ್ಷಕರಿಗೆ ಒಂದು ವಾರ ಕಾಲ ಆನ್​ಲೈನ್ ಮೂಲಕ ವಿಜ್ಞಾನ ಚಿತ್ರಗಳನ್ನು ರಚಿಸುವ ತರಬೇತಿ ನೀಡಿರುವ ಹಿನ್ನೆಲೆ ಇಲಾಖೆಯು ಇವರನ್ನು ಅಭಿನಂದಿಸಿದೆ.

ಅಲ್ಲದೇ ದೇಶದ ಸಾರ್ವತ್ರಿಕ ಮತ್ತು ಆಂತರಿಕ ಭದ್ರತೆಗೆ ಸವಾಲಾಗಿರುವ ಚೀನಿ ಆ್ಯಪ್​ಗಳು ಹೆಚ್ಚಾಗಿ ಬಳಕೆಯಾಗುತ್ತಿರುವ ಮಧ್ಯೆಯೂ ಈ ಶಿಕ್ಷಕ, ತಮ್ಮ ಸಹಪಾಠಿ ಶಿಕ್ಷಕರಿಗೆ ಮೈಕ್ರೋಸಾಫ್ಟ್ ಭೀಮ್ ಆ್ಯಪ್ ಮೂಲಕ ತರಬೇತಿ ನೀಡಿರುವುದು ಗಮನಾರ್ಹ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.