ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneet rajkumar) ಅಕಾಲಿಕ ನಿಧನದಿಂದ ಕೋಟ್ಯಂತರ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಪುನೀತ್ ಭೌತಿಕವಾಗಿಲ್ಲದಿದ್ದರೂ ನಾನಾ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಬಸ್ ಮೇಲಿನ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ವೃದ್ಧೆಯೊಬ್ಬರು (Old woman) ಮುತ್ತಿಟ್ಟು, ಸೆರಗಿನಿಂದ ಮುಖ ಸವರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social media) ಸಖತ್ ವೈರಲ್ ಆಗಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿನ ಬಸ್ ಮೇಲಿನ ಜಾಹೀರಾತುವೊಂದರಲ್ಲಿ ಪುನೀತ್ ರಾಜ್ಕುಮಾರ ಅವರ ಭಾವಚಿತ್ರವಿದೆ. ಅಪ್ಪು ಭಾವಚಿತ್ರ ನೋಡಿದ ಅಜ್ಜಿಯೊಬ್ಬರು (Old woman) ಭಾವುಕರಾಗಿ ಫೋಟೋಗೆ ಮುತ್ತಿಟ್ಟು, ಅದರ ಮೇಲಿನ ಧೂಳನ್ನು ಸೆರಗಿನಿಂದ ಒರೆಸಿ ಸ್ವಚ್ಚಗೊಳಿಸಿದ್ದಾರೆ.
ಈ ದೃಶ್ಯವನ್ನು ಸ್ಥಳೀಯರು ದೂರದಿಂದ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಎಂತಹವರನ್ನೂ ಮಮ್ಮಲ ಮರಗುವಂತೆ ಮಾಡುವಂತಿದೆ.
ಇದನ್ನೂ ಓದಿ: ತವರಲ್ಲಿ ದೇವರಾದ ಅಪ್ಪು: ಚಾಮರಾಜನಗರದಲ್ಲಿ 'ಪುನೀತ್' ಫೋಟೋಗಳಿಗೆ ಭಾರಿ ಬೇಡಿಕೆ