ETV Bharat / state

ಉಪ ಚುನಾವಣೆಯಲ್ಲಿ ಮತ ಚಲಾಯಿಸಿದ ಶತಾಯುಷಿ.. ಮತದಾನಕ್ಕೆ ಈ ಮಹಾತಾಯಿ ಮಾದರಿ..

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 21ರಲ್ಲಿ ಹಿರಿಯಜ್ಜಿ ಸಿದ್ದಲಿಂಗಮ್ಮ ತಮ್ಮ ಇಳಿವಯಸ್ಸಿನಲ್ಲೂ ಬತ್ತದ ಉತ್ಸಾಹದಿಂದ ಮತ ಚಲಾಯಿಸಿ ಮಾದರಿಯಾಗಿದ್ದಾರೆ..

author img

By

Published : Sep 3, 2021, 10:33 PM IST

Siddhalingamma Mahanthayya Hiremath
ಸಿದ್ದಲಿಂಗಮ್ಮ ಮಹಾಂತಯ್ಯ ಹಿರೇಮಠ

ಕುಷ್ಟಗಿ(ಕೊಪ್ಪಳ) : ಕುಷ್ಟಗಿ ಪಟ್ಟಣದ 16ನೇ ವಾರ್ಡ್​ನ ಉಪ ಚುನಾವಣೆಯಲ್ಲಿ ಶತಾಯುಷಿ ಅಜ್ಜಿ ಸಿದ್ದಲಿಂಗಮ್ಮ ಮಹಾಂತಯ್ಯ ಹಿರೇಮಠ ಅವರು ಮತದಾನ ಮಾಡಿ ಸೈ ಎನಿಸಿಕೊಂಡರು.

old-woman-voted-in-kushtagi-municipal-by-election
ಶತಾಯುಷಿ ಅಜ್ಜಿ ಸಿದ್ದಲಿಂಗಮ್ಮ ಮಹಾಂತಯ್ಯ ಹಿರೇಮಠ

ಕುಷ್ಟಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 21ರಲ್ಲಿ ನಡೆದ ಮತದಾನದ ಸಮಯದಲ್ಲಿ ಹಿರಿಯ ಜೀವ ಸಿದ್ದಲಿಂಗಮ್ಮ ತಮ್ಮ ಇಳಿವಯಸ್ಸಿನಲ್ಲೂ ಬತ್ತದ ಉತ್ಸಾಹದಿಂದ ಮತ ಚಲಾಯಿಸಿ, ಮತದಾನದಿಂದ ದೂರ ಉಳಿಯುವವರಿಗೆ ಮಾದರಿಯಾದರು. 106 ವಯಸ್ಸಿನ ಹಿರಿಯಜ್ಜಿ ತನ್ನ ಸಹಾಯಕರೊಂದಿಗೆ ವ್ಹೀಲ್ ಚೇರ್​ನಲ್ಲಿ ಆಗಮಿಸಿದ್ದರು.

ಶುಕ್ರವಾರ ನಡೆದ ಮತದಾನದಲ್ಲಿ ಒಟ್ಟು 948 ಮತದಾರರಲ್ಲಿ ಪುರುಷರು 357 ಹಾಗೂ ಮಹಿಳೆಯರು 358 ಸೇರಿದಂತೆ ಒಟ್ಟು 715 ಜನ ಮತಚಲಾಯಿಸಿದ್ದಾರೆ. ಒಟ್ಟು ಶೇ.75.48ರಷ್ಟು ಮತದಾನವಾಗಿದೆ.

ಓದಿ: ಸಮುದ್ರದ ಉಪ್ಪು ನೀರನ್ನು ಶುದ್ಧ ಕುಡಿಯುವ ನೀರನ್ನಾಗಿಸುವ ವಿನೂತನ ತಂತ್ರಜ್ಞಾನ: ಮಂಗಳೂರಿನಲ್ಲಿ ಪ್ರಥಮ ಪ್ರಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.