ETV Bharat / state

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗದೆ ವೃದ್ಧೆ ಸಾವು ಆರೋಪ - ವೃದ್ಧೆ ಸಾವು

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ವೃದ್ಧೆಯೋರ್ವರು ಮೃತಪಟ್ಟಿದ್ದು, ಆಸ್ಪತ್ರೆ ಸಿಬ್ಬಂದಿ ವೆಂಟಿಲೇಟರ್ ನೀಡದೆ ನಿರ್ಲಕ್ಷ್ಯ ವಹಿಸಿದ ಆರೋಪ ಕೇಳಿ ಬಂದಿದೆ.

negligence allegation against Hospital staff
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ವೃದ್ಧೆ ಸಾವು
author img

By

Published : May 20, 2021, 9:51 AM IST

ಕೊಪ್ಪಳ: ವೆಂಟಿಲೇಟರ್ ಸಿಗದೆ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ರಹಿತ ರೋಗಿಯೊಬ್ಬರು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.

ಜಿಲ್ಲಾಸ್ಪತ್ರೆಯ ಸಾರಿ ವಿಭಾಗದಲ್ಲಿ ದಾಖಲಾಗಿದ್ದ ತಾಲೂಕಿನ ಅಗಳಕೇರಾ ನಿವಾಸಿ ಹುಲಿಗೆಮ್ಮ ಎಂಬ ವೃದ್ಧೆ ವೆಂಟಿಲೇಟರ್ ಸಿಗದೆ ಬುಧವಾರ ಸಂಜೆ ಮೃತಪಟ್ಟಿರುವುದಾಗಿ ಸಂಬಂಧಿಕರು ಆರೋಪಿಸಿದ್ದಾರೆ. ವೃದ್ಧೆಯ ಮೃತದೇಹವಿಟ್ಟು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು ಎನ್ನಲಾದ ವಿಡಿಯೋ ಒಂದು ಲಭ್ಯವಾಗಿದೆ.

ವೈರಲ್ ವಿಡಿಯೋ

ಓದಿ : ಜಿಮ್ಸ್​ನಲ್ಲಿ ಸೋಂಕಿತ ಮಹಿಳೆ ಸಾವು: ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ

ವಿಡಿಯೋದಲ್ಲಿ, ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ವೃದ್ಧೆ ಮೃತಪಟ್ಟಿರುವುದಾಗಿ ಸಂಬಂಧಿಕರು ಕಣ್ಣೀರಿಡುತ್ತಿರುವ ದೃಶ್ಯ ಕಾಣಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.