ETV Bharat / state

ಕುಷ್ಟಗಿ: ಮಳೆಗೆ ತುಂಬಿದ ಹಳ್ಳ... ದಾಟಲು ಯತ್ನಿಸಿ ಕೊಚ್ಚಿ ಹೋದ ವೃದ್ಧ - kustagi latest crime news

ಹಿರೇಮನ್ನಾಪೂರ ಚಾಕ್ರಿ ಹಳ್ಳದ ಪ್ರವಾಹಕ್ಕೆ ವೃದ್ಧನೋರ್ವ ಕೊಚ್ಚಿ ಹೋಗಿದ್ದಾನೆ. ಬುಡೆನ್​​ಸಾಬ್ ಅಗಸಿಮುಂದಿನ (65) ಹಳ್ಳದ ಪ್ರವಾಹಕ್ಕೆ ಬಲಿಯಾದ ವೃದ್ಧ.

ಬುಡ್ನೆಸಾಬ್ ಅಗಸಿಮುಂದಿನ
ಬುಡ್ನೆಸಾಬ್ ಅಗಸಿಮುಂದಿನ
author img

By

Published : Oct 24, 2021, 4:45 PM IST

ಕುಷ್ಟಗಿ (ಕೊಪ್ಪಳ): ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಹಿರೇಮನ್ನಾಪೂರ ಚಾಕ್ರಿ ಹಳ್ಳದ ಪ್ರವಾಹಕ್ಕೆ ವೃದ್ಧನೋರ್ವ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಬುಡೆನ್​​ಸಾಬ್ ಅಗಸಿಮುಂದಿನ (65) ಹಳ್ಳದ ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ವೃದ್ಧ.

ಇಳಿವಯಸ್ಸಿನಲ್ಲಿ ಮನೆಯಲ್ಲಿ ಖಾಲಿ ಕುಳಿತುಕೊಳ್ಳದ ಬುಡೆನ್​​ಸಾಬ್ ಹಿರೇಮನ್ನಾಪೂರ ಗ್ರಾಮದಿಂದ ಜುಮ್ಲಾಪೂರ ರಸ್ತೆಯಲ್ಲಿರುವ ಚಾಕ್ರಿ ಹಳ್ಳದ ಆಚೆ ಇರುವ ಜಮೀನಿಗೆ ಎತ್ತು ತೆಗೆದುಕೊಂಡು ಹೋಗಿದ್ದರು. ಮೋಡ ಕವಿಯುತ್ತಿದ್ದಂತೆ‌ ಮನೆಯತ್ತ ಎತ್ತಿನೊಂದಿಗೆ ಹೆಜ್ಜೆ ಹಾಕಿದ್ದರು. ಆ ವೇಳೆಗೆ ಮಳೆ ಸುರಿದು ತುಂಬಿದ ಹಳ್ಳ ದಾಟಲು ಸಂದರ್ಭದಲ್ಲಿ ಎತ್ತಿನ ಸಮೇತ ಕೊಚ್ಚಿ ಹೋಗಿದ್ದರು. ಎತ್ತು ದಡ ಸೇರಿದ್ದು, ಬುಡೆನ್​ಸಾಬ್ ಪ್ರವಾಹ ವಿರುದ್ಧ ಈಜಲಾಗದೇ ಮೃತಪಟ್ಟಿದ್ದಾರೆ.

ವಾಪಸ್​​ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಪ್ರವಾಹ ತಗ್ಗಿದ ಬಳಿಕ ಅವರ ಶವ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ತಹಶೀಲ್ದಾರ್​​ ಎಂ.ಸಿದ್ದೇಶ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೇತುವೆ ನಿರ್ಮಿಸುವಂತೆ ಮನವಿ:

ಇದೇ ಹಳ್ಳದ ಪ್ರವಾಹಕ್ಕೆ ಕೆಲ ವರ್ಷಗಳ ಹಿಂದೆ ರೈತ ಮಹಿಳೆಯೋರ್ವರು ಕೊಚ್ಚಿ ಹೋಗಿದ್ದರು. ಮತ್ತೆ ಪ್ರಕರಣ ಮರುಕಳಿಸಿದ್ದು, ಇಲ್ಲೊಂದು ಬ್ರಿಡ್ಜ್ ಕಮ್ ಬ್ಯಾರೇಜ್, ಮಿನಿ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.