ETV Bharat / state

ದಸರಾ ಮಾತ್ರವಲ್ಲ, ಕನ್ನಡ ತಾಯಿ ಭುವನೇಶ್ವರಿ ಮೂಲ ಹಂಪಿ: ಜನಾರ್ದನ ರೆಡ್ಡಿ - ಗಾಲಿ ಜನಾರ್ದನ ರೆಡ್ಡಿ

ಸರ್ಕಾರ ಹಣ ಕೊಡಲಿ ಬಿಡಲಿ, ಹಂಪಿ ಉತ್ಸವದ ಮಾದರಿಯಲ್ಲೇ ಆನೆಗೊಂದಿ ಉತ್ಸವ ಮಾಡೋಣ ಎಂದು ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

MLA Janardana reddy
ಶಾಸಕ ಗಾಲಿ ಜನಾರ್ದನ ರೆಡ್ಡಿ
author img

By

Published : Jun 7, 2023, 12:57 PM IST

ಶಾಸಕ ಗಾಲಿ ಜನಾರ್ದನ ರೆಡ್ಡಿ

ಗಂಗಾವತಿ: ಇಂದು ಮೈಸೂರಿನಲ್ಲಿ ಆಚರಿಸುತ್ತಿರುವ ದಸರಾ ವಿಶ್ವ ವಿಖ್ಯಾತವಾಗಿರಬಹುದು. ಆದರೆ ದಸರಾ ಮಾತ್ರವಲ್ಲ, ಕನ್ನಡ ತಾಯಿ ಭುವನೇಶ್ವರಿಯ ಮೂಲ ಕೂಡ ಹಂಪಿಯಾಗಿದೆ ಎಂದು ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕ, ಗಂಗಾವತಿ ತಾಲೂಕು ಘಟಕ ಹಾಗೂ ಸರ್ಕಾರಿ ನೌಕರರ ಸಂಘದಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದರು. ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಾನದಲ್ಲಿರುವ ಭುವನೇಶ್ವರಿಯೇ ಮೂಲ ಕನ್ನಡ ತಾಯಿ ಎಂದರು.

ದಸರಾ ಅಂದರೆ ಅದು ನಮ್ಮದು. ಶ್ರೀಕೃಷ್ಣ ದೇವರಾಯರ ಕಾಲದಲ್ಲಿ ಮಹಾನವಮಿ ದಿಬ್ಬದ ಸಮೀಪ 40 ಸಾವಿರ ಆನೆ, ಎರಡು ಲಕ್ಷ ಕುದುರೆಗಳು ಪ್ರದರ್ಶನದ ಮೂಲಕ ವಿಜಯನಗರದ ಸಾಮ್ರಾಜ್ಯದ ಶಕ್ತಿ ಏನೆಂಬುದನ್ನು ದಸರಾದಲ್ಲಿ ತೋರಿಸುತ್ತಿದ್ದರು. ಈ ಆನೆಗಳ ಮೇಲೆ ತಾಯಿ ಭುವನೇಶ್ವರಿ ದೇವಿಯನ್ನೂ ಕೂರಿಸಿಕೊಂಡು ಮೆರವಣಿಗೆ ಮಾಡಿ ದಸರಾ ಹಬ್ಬವನ್ನು ಮೊದಲಿಗೆ ಆಚರಿಸಿದ್ದು ಹಂಪಿಯಲ್ಲಿ. ವಿಜಯನಗರ ಸಾಮ್ರಾಜ್ಯ ಪತನವಾದ ಬಳಿಕವೇ ಅದು ಮೈಸೂರಿಗೆ ದಸರಾ ಉತ್ಸವ ಸ್ಥಳಾಂತರವಾಯಿತು ಎಂದರು.

ಹಂಪಿಯಂತೆ ಆನೆಗೊಂದಿ ಉತ್ಸವ: ಹಂಪಿ ಉತ್ಸವ ಹೇಗೆ ಸರ್ಕಾರ ಮಾಡುತ್ತದೆಯೋ ಅದೇ ಮಾದರಿಯಲ್ಲಿ ಆನೆಗೊಂದಿ ಉತ್ಸವ ಮಾಡೋಣ. ಸರ್ಕಾರ ಹಣ ಕೊಡಲಿ ಬಿಡಲಿ. ಸ್ಥಳೀಯವಾಗಿ ಸಂಪನ್ಮೂಲ ಕ್ರೋಢೀಕರಣ ಮಾಡಿ ಇಡೀ ರಾಜ್ಯ ಮತ್ತೆ ಆನೆಗೊಂದಿಯತ್ತ ನೋಡುವಂತೆ ಆನೆಗೊಂದಿ ಉತ್ಸವ ಆಚರಣೆ ಮಾಡೋಣ. ಈ ಭಾಗದ ಐತಿಹಾಸಿಕ ಸ್ಮಾರಕಗಳ ಪುನಃಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು. ಅವುಗಳನ್ನು ಆಕರ್ಷಣೀಯವಾಗಿ ಮಾಡಲು ಈ ಹಿಂದೆ ನಾನು ಹಂಪಿಯಲ್ಲಿ ಸೌಂಡ್ ಆ್ಯಂಡ್ ಲೈಟ್, ಹಂಪಿ ಬೈ ನೈಟ್ ಎಂಬ ಯೋಜನೆಗಳನ್ನು ಜಾರಿಗೆ ಮಾಡಲಾಗಿತ್ತು.

ನಾನು ಪ್ರವಾಸೋದ್ಯಮ ಸಚಿವನಾಗಿ ಹಾಗೂ ಹಂಪಿಯ ಬಗ್ಗೆ ಇದ್ದ ಪ್ರೀತಿಗೆ ಈ ಹಿಂದೆ ಕೇವಲ ನಲವತ್ತು ತಿಂಗಳಲ್ಲಿ 64 ಬಾರಿ ಹಂಪಿ - ಆನೆಗೊಂದಿಗೆ ಭೇಟಿ ನೀಡಿದ್ದೆ. ಅದೇ ಮಾದರಿಯ ಆನೆಗೊಂದಿ-ಗಂಗಾವತಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಗುಜರಾತ್ ಮೂಲದ ಒಂದು ಖಾಸಗಿ ಕಂಪನಿಗೆ ಮಾಸ್ಟರ್ ಪ್ಲ್ಯಾನ್ ಮಾಡಿ ಕೊಡಲು ಸೂಚನೆ ನೀಡಲಾಗಿದೆ ಎಂದರು.

ಸಮ್ಮೇಳನಗಳ ಜವಾಬ್ದಾರಿ: ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ನಾನೊಬ್ಬ ಶಾಸಕನಾಗಿ ಅಲ್ಲ, ನಿಮ್ಮ ಪರಿಷತ್ತಿನ ಸದಸ್ಯನಾಗಿ ಎಲ್ಲ ಮಾದರಿಯ ಸಹಕಾರ ನೀಡುತ್ತೇನೆ. ಅದು ನನ್ನ ಜವಾಬ್ದಾರಿ. ಈ ಭಾಗದ ಯುವ ಬರಹಗಾರರು, ಲೇಖಕರ ಕೃತಿಗಳ ಮುದ್ರಣಕ್ಕೆ ಸೂಕ್ತ ಪ್ರೋತ್ಸಾಹ ನೀಡುತ್ತೇನೆ. ಕಸಾಪ ಭವನದ ನವೀಕರಣಕ್ಕೆ ಸರ್ಕಾರದ ಅನುದಾನದಲ್ಲಿ ಸಾಧ್ಯವಾಗದೇ ಹೋದಲ್ಲಿ ವೈಯಕ್ತಿಕ ಅನುದಾನ ನೀಡಿ ಅಭಿವೃದ್ಧಿ ಮಾಡಲಾಗುವುದು ಎಂದರು.

ಕುವೆಂಪುರಂತಹ ಬೆರೆಳೆಣಿಕೆಯ ಮಹಾನೀಯರನ್ನು ಬಿಟ್ಟರೆ ಬಹುತೇಕ ಕವಿಗಳು ಶೇ. 90ರಷ್ಟು ನಮ್ಮ ಭಾಗದವರು. ದಕ್ಷಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಬಳ್ಳಾರಿ ರಾಘವ, ಬೀಚಿ, ದೇಶಕ್ಕೆ ಮೊದಲ ಮೂಕಿ ಚಿತ್ರ ನೀಡಿರುವ ರಾಧಾ ಕೃಷ್ಣಮಾಚಾರಿ ಸೇರಿದಂತೆ ಈ ಭಾಗದಲ್ಲಿ ಕವಿಗಳು, ಸಾಹಿತಿ, ಲೇಖಕರು, ಬರಹಾಗರರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಅವರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕಿದೆ.

ವಿದೇಶದಲ್ಲೂ ಪಟ್ಟಾಭಿಷೇಕದ ಸಂಭ್ರಮ: ಶ್ರೀ ಕೃಷ್ಣ ದೇವರಾಯರ 500ನೇ ಪಟ್ಟಾಭಿಷೇಕ ಮಹೋತ್ಸವವನ್ನು ಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿ ರಾಜ್ಯ, ದೇಶದ ರಾಜಧಾನಿಗಳಾದ ಮುಂಬೈ, ಕಲ್ಕತ್ತಾ, ಡೆಲ್ಲಿ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿ ಮಾಡುವುದರ ಜೊತೆಗೆ ಅಮೆರಿಕ, ಲಂಡನ್, ಫ್ರಾನ್ಸ್, ದುಬೈ, ಸ್ವಿಟ್ಜರ್​ಲ್ಯಾಂಡ್, ಜರ್ಮನಿ, ದುಬೈ, ಬ್ರೆಜಿಲ್​ನಂತಹ ದೇಶಗಳಲ್ಲಿ ಪಟ್ಟಾಭಿಷೇಕ ಮಹೋತ್ಸವದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶ್ರೀ ಕೃಷ್ಣ ದೇವರಾಯರಿಗೆ ಯಾವ ದೇಶಗಳೊಂದಿಗೆ ಸಂಬಂಧ-ಅನುಬಂಧ ಇತ್ತೋ ಅಂಥಹ ದೇಶಗಳಲ್ಲಿ ಹಂಪಿಯ ಬಗ್ಗೆ ಪ್ರಚಾರ ಮಾಡಲು ನಾನೇ ಖುದ್ದಾಗಿ ಹೋಗಿದ್ದೆ. ಹಂಪಿ ಉತ್ಸವದ ಮೂರು ದಿನಗಳ ಕಾಲ ತಲಾ 25 ಲಕ್ಷ ತಂದಿದ್ದೆ, ನಾಲ್ಕು ವರ್ಷ ಕಾಲ ಒಂದು ಕೋಟಿ ಜನ ಭಾಗಿಯಾಗುವಂತೆ ಉತ್ಸವದ ಕಾರ್ಯಕ್ರಮ ನೋಡುವಂತೆ ಮಾಡಿದ್ದೆ ಎಂದು ರೆಡ್ಡಿ ಹೇಳಿದರು.

ಇದನ್ನೂ ಓದಿ: ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿ - ಕ್ಷೇತ್ರದ ಜನರಿಗೆ ಡಬಲ್ ಬೆಡ್ ರೂಂ ಮನೆ: ರೆಡ್ಡಿ ಅಭಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.