ಕುಷ್ಟಗಿ (ಕೊಪ್ಪಳ): ಕೋವಿಡ್ ವೈರಸ್ ಹಬ್ಬುವ ಕಾರಣದಿಂದ, ಕುಷ್ಟಗಿ ತಾಲೂಕಿನಲ್ಲಿ ಕೆಪಿಎಂಇ ಅಡಿಯಲ್ಲಿ ನೊಂದಣಿಯಾಗದ ಖಾಸಗಿ ವೈದ್ಯಕೀಯ ಸೇವೆ ಬಂದ್ ಮಾಡಲು ಸೂಚನೆ ನೀಡಲಾಗಿದೆ. ಇಂಥವರ ಮೇಲೆ ನಿಗಾವಹಿಸಲು ತಹಶೀಲ್ದಾರ ಹಾಗೂ ಸಿಪಿಐ ಅವರಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ನಡೆದ ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ತುರ್ತು ಸಭೆ ಬಳಿಕ ಮಾತನಾಡಿದರು. ಎಂಬಿಬಿಎಸ್, ಬಿಎಂಎಸ್ ವೈದ್ಯರು ನೇರವಾಗಿ ಕೋವಿಡ್ ಲಕ್ಷಣಗಳಿರುವ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಯ ಕೋವಿಡ್ ಟೆಸ್ಟ್ಗೆ ಕಳುಹಿಸುವ ಜವಾಬ್ದಾರಿ ಇರುತ್ತದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಆರ್ಎಂಪಿಗಳು ಇದ್ಯಾವುದು ಅನುಸರಿಸುವುದಿಲ್ಲ ತಾವೇ ಚಿಕಿತ್ಸೆ ನೀಡುತ್ತಿದ್ದು, ಇದರಿಂದ ತಾಲೂಕಾ ವೈದ್ಯಾಧಿಕಾರಿಗಳಲ್ಲಿ ಕಾನೂನು ಬಾಹಿರವಾಗಿ ಅನಧಿಕೃತ ಸೇವೆಯ ವೈದ್ಯರ ಪಟ್ಟಿ ಇದ್ದು ಸದರಿಯವರ ವಿರುದ್ದ ಕ್ರಮಕ್ಕೆ ಈ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕೊರೊನಾ ಸೋಂಕು ವ್ಯಾಪಿಸುತ್ತಿರುವ ಸದ್ಯದ ಗಂಭೀರ ಪರಿಸ್ಥಿತಿಯಲ್ಲೂ ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೆಪಿಎಂಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ) ಅಡಿಯಲ್ಲಿ ನೊಂದಣಿ ಮಾಡಿಕೊಳ್ಳದೇ ಸೇವೇಯಲ್ಲಿದ್ದು, ಈ ವೈದ್ಯರು ಯಾವೂದೇ ಮುನ್ನೆಚ್ಚರಿಕೆ ಅನ್ವಯಿಸಿಕೊಳ್ಳದೇ ರೋಗಿಗಳ ತಪಾಸಣೆ ಮುಂದಾಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇನ್ಮುಂದೆ ಸಭೆ, ಸಮಾರಂಭಗಳನ್ನು ಸರ್ಕಾರ ಕೋವಿಡ್ ಮಾರ್ಗಸೂಚಿಯನ್ವಯ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಸಭೆ ಸಮಾರಂಭಗಳಿಗೆ ನೂರು ಜನರ ಮಿತಿ, ಮದುವೆ ಕಾರ್ಯಕ್ರಮಗಳಿಗೆ 200ರ ಮಿತಿ ಹಾಕಿಕೊಳ್ಳಲಾಗಿದೆ. ಜಾತ್ರೆ, ನಾಟಕ ಪ್ರದೇರ್ಶನ ಎಲ್ಲವೂ ನಿಷೇಧ ಮಾಡಲಾಗಿದೆ. ಚಿತ್ರಮಂದಿರದಲ್ಲಿ ಶೇ.50 ರಷ್ಟು ಮಿತಿ ಕಡ್ಡಾಯ ಜಾರಿಗೊಳಿಸಲಾಗಿದ್ದು, ಉಲ್ಲಂಘಿಸಿದರೆ ಸದರಿಯವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತಿದೆ ಎಂದರು.
ಕಳೆದ ಏ.16ರಂದು ಕೊಪ್ಪಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಪಾಟೀಲ ನೇತೃತ್ವದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳು ಜಾಗೃತಿ ಕುರಿತ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕುಷ್ಟಗಿಯಲ್ಲಿ ತಹಶೀಲ್ದಾರ, ಸಿಪಿಐ, ತಾ.ಪಂ.ಇಓ, ಬಿಇಒ, ಮುಖ್ಯಾಧಿಕಾರಿ ಹಾಗೂ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಈ ಸಭೆ ನಡೆಸಲಾಗಿದೆ. ಸರ್ಕಾರದ ರೀತಿ ನೀತಿ, ಕಟ್ಟಳೆಗಳು ಜಾರಿಯಾಗುವ ನಿಟ್ಟಿನಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸಿ ಕೆಲಸ ಮಾಡಬೇಕು. ಸಕರ್ಾರದ ಆದೇಶದಂತೆ ಅಧಿಕಾರಿಗಳು ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದರು.